ಬಾಲಕ ನಾಪತ್ತೆ
Update: 2017-07-26 20:56 IST
ಕುಂದಾಪುರ, ಜು.26: ಉಡುಪಿ ನಿಟ್ಟೂರು ಮಕ್ಕಳ ಕಲ್ಯಾಣ ಸಮಿತಿಯಿಂದ ಕನ್ಯಾನ ನಮ್ಮ ಭೂಮಿ ಸಂಸ್ಥೆಗೆ ದಾಖಲಾಗಿದ್ದ ಮೊಯಿಶ್ ಮುಹಮ್ಮದ್(11) ಎಂಬಾತ ಜು.25ರಂದು ಸಂಜೆ ಶಾಲೆಗೆ ಹೋಗಿ ಬಂದು ಉಪಹಾರ ಸೇವಿಸಿ ನಂತರ ನಾಪತ್ತೆಯಾಗಿದ್ದಾನೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.