ಮಧುವನ ಮಸೀದಿ ಅಧ್ಯಕ್ಷರಿಗೆ ಹಲ್ಲೆ: ದೂರು
Update: 2017-07-26 20:57 IST
ಕೋಟ, ಜು.26: ವಡ್ಡೆರ್ಸೆ ಗ್ರಾಮದ ಮಧುವನ ಉಮರು ಬನುಲ್ ಖತ್ವಾಬ್ ಜುಮಾ ಮಸೀದಿಯ ಅಧ್ಯಕ್ಷ ಕೆ.ಇಬ್ರಾಹಿಂ ಬ್ಯಾರಿ (62) ಎಂಬವರಿಗೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಾದವೊಂದಕ್ಕೆ ಸಂಬಂಧಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಮಾತ್ ಲೇಟರ್‌ಹೆಡ್‌ನಲ್ಲಿ ಪತ್ರವನ್ನು ರಹಮತ್ ಎಂಬವರಿಗೆ ಅಂಚೆ ಮೂಲಕ ಕಳುಹಿಸಿದ್ದು, ಇದೇ ವಿಚಾರದಲ್ಲಿ ರಹಮತ್ ಜು. 25ರಂದು ರಾತ್ರಿ ಕೆ.ಇಬ್ರಾಹಿಂ ಬ್ಯಾರಿ ಅವರನ್ನು ಮಸೀದಿ ಕಂಪೌಂಡ್ ಹೊರಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.