×
Ad

ಕೆ.ಸಿ.ರೋಡು: ಮಿನ್‌ಹಾಜು ಸ್ವಾಲಿಹತ್ ಮಹಿಳಾ ಶರೀಅತ್ ಕಾಲೇಜ್ ಉದ್ಘಾಟನೆ

Update: 2017-07-26 22:17 IST

ಉಳ್ಳಾಲ, ಜು.26: ಮಹಿಳೆಯರಿಗೆ ಉನ್ನತ ಧಾರ್ಮಿಕ ಹಾಗೂ ಲೌಕಿಕ ವಿದ್ಯೆ ನೀಡಿದಾಗ ಇಡೀ ಕುಟುಂಬ ಸುಶಿಕ್ಷಿತರಾಗಲು ಸಾಧ್ಯ ಎಂದು ಅಸೈಯದ್‌ ಇಸ್ಮಾಯೀಲ್ ಮದನಿ ತಂಙಳ್ ಅಲ್-ಹಾದಿ ಉಜಿರೆ ಆಭಿಪ್ರಾಯಪಟ್ಟರು.

ತಲಪಾಡಿ ಕೆ.ಸಿ.ರೋಡು ತಾಜ್ ನಗರದಲ್ಲಿ ಮಿನ್‌ಹಾಜು ಸುನ್ನ ಫೌಂಡೇಶನ್ ನಿರ್ಮಿಸಿದ ಮಿನ್‌ಹಾಜು ಸ್ವಾಲಿಹತ್ ಮಹಿಳಾ ಶರೀಅತ್ ಕಾಲೇಜ್ ಕಟ್ಟಡ ಉದ್ಘಾಟಿಸಿ ಅವರು ಮತನಾಡಿದರು.

ಮುಸ್ಲಿಂ ಮಹಿಳೆಯರು ಸುರಕ್ಷತೆಯ ಕೊರತೆಯಿಂದ ಧಾರ್ಮಿಕ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಇಂತಹ ಮಹಿಳಾ ಸಂಸ್ಥೆಯಿಂದ ಸುರಕ್ಷಿತವಾಗಿ ಉನ್ನತ ಶಿಕ್ಷಣ ಪಡೆದು ಭವಿಷ್ಯದಲ್ಲಿ ಮಹಿಳಾ ಉಪನ್ಯಾಸಕರಾಗಿದ್ದುಕೊಂಡು, ಇನ್ನಷ್ಟು ಮಹಿಳೆಯರಿಗೆ ತರಬೇತಿ ನೀಡುವಂತಾಗಬೇಕು ಎಂದು ಅಸೈಯದ್‌ ಇಸ್ಮಾಯೀಲ್ ಮದನಿ ತಂಙಳ್ ಅಲ್-ಹಾದಿ ಉಜಿರೆ ಆಶಿಸಿದರು.

ಎಸ್‌ವೈಎಸ್ ರಾಜ್ಯಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಸೈಯದ್ ಸಿಟಿಎಂ ಸಲೀಂ ಅಸ್ಸಖಾಫ್ ತಂಙಳ್ ಕೆ.ಸಿ.ರೋಡು ದುಆ ನೆರವೇರಿಸಿದರು. ಮಿನ್‌ಹಾಜುಸ್ಸುನ್ನ ಫೌಂಡೇಶನ್ ಅಧ್ಯಕ್ಷ ಎಮ್ಮೆಸ್ಸೆಂ ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಅಬೂಸುಫ್ಯಾನ್ ಮದನಿ, ಕೆಸಿಎಫ್ ಸೌದಿ ನ್ಯಾಷನಲ್ ಕಮಿಟಿಯ ಡಿ.ಪಿ. ಯೂಸೂಫ್ ಸಖಾಫಿ ಬೈತಾರ್, ಅಸೈಯದ್ ಹುಸೈನ್ ಆಟಕೋಯ ತಂಙಳ್ ಪೂಮಣ್ಣು, ಸೈಯದ್ ಶರಫುದ್ದೀನ್ ಹಿಮಮಿ ಅಲ್ ಹೈದ್ರೋಸ್ ಎಮ್ಮೆಮ್ಮಾಡ್, ಸುರತ್ಕಲ್ ಕಾಟಿಪಳ್ಳದ ಮಿಸ್ಬಾಹ್ ಮಹಿಳಾ ಕಾಲೇಜಿನ ಅಧ್ಯಕ್ಷ ಹಾಜಿ ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ, ಪಂಪ್‌ವೆಲ್ ತಖ್ವಾ ಹಿಫ್‌ಳುಲ್ ಖುರ್‌ಆನ್ ಅಕಾಡಮಿ ಮುಖ್ಯಸ್ಥ ಇರ್ಫಾನ್ ಅಬ್ದುಲ್ಲಾಹ್ ನೂರಾನಿ ಕಿನ್ಯ, ಉಚ್ಚಿಲ ಮುದರ್ರಿಸ್ ಇಬ್ರಾಹಿಂ ಫೈಝಿ, ಎಸ್‌ಜೆಎಂ ತಲಪಾಡಿ ರೇಂಜ್ ಅಧ್ಯಕ್ಷ ಇಬ್ರಾಹೀಂ ಮದನಿ, ಕೆ.ಸಿ.ರೋಡ್ ಎಂಜೆಎಂ ಮುದರ್ರಿಸ್ ಮುನೀರ್ ಸಖಾಫಿ, ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಬಾರಿ ಸಅದಿ, ತಲಪಾಡಿ ಸೆಕ್ಟರ್ ಎಸ್ಸೆಸ್ಸೆಫ್ ಅಧ್ಯಕ್ಷ ಅಬ್ದುರ್ರಹೀಂ ಝುಹರಿ, ಮಾಡೂರು ಐಜೆಎಂ ಮಸೀದಿಯ ಖತೀಬ್ ಬಶೀರ್ ಅಹ್ಸನಿ ತೋಡಾರ್, ಕಾಟುಂಗರೆ ಗುಡ್ಡೆ ಇಮಾಂ ಮುಹಿಯ್ಯದ್ದೀನ್ ಮಸೀದಿಯ ಇಮಾಂ ಫಾರೂಕ್ ಸಅದಿ, ಮುಳ್ಳುಗುಡ್ಡೆ ಇಮಾಂ ಮಸ್ಜಿದುಲ್ ಹಿದಾಯದ ಇಮಾಂ ಅಝೀಝ್ ಸಖಾಫಿ, ಉಚ್ಚಿಲಗುಡ್ಡೆ ರೆಹ್ಮಾನಿಯಾ ಮಸೀದಿಯ ಇಮಾಂ ಅಕ್ಬರ್ ಸಅದಿ, ಕೊಮರಂಗಳ ತಕ್ವಾ ಮಸೀದಿಯ ಇಮಾಂ ಅಶ್ರಫ್ ಸಖಾಫಿ, ಪಂಜಳ ಬಿಜೆಎಂನ ಇಮಾಂ ಮೆಹಮೂದ್ ಸಖಾಫಿ, ಎಸ್‌ಎಂಎ ಉಳ್ಳಾಲ ವಲಯಾಧ್ಯಕ್ಷ ಅಹ್ಮದ್ ಕುಂಞಿ ಹಾಜಿ ಪಿಲಿಕೂರು, ಎಸ್‌ಎಂಎ ತಲಪಾಡಿ ವಲಯಾಧ್ಯಕ್ಷ ಅಬ್ಬಾಸ್ ಹಾಜಿ ಕೋಮರಂಗಳ, ವಿದ್ಯಾನಗರ ಫಲಾಹ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯು.ಬಿ.ಮುಹಮ್ಮದ್ ಹಾಜಿ, ಕೋಟೆಕಾರ್ ಮರ್ಕಝಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಎಂ.ಅಬ್ದುಲ್ಲ ಹಾಜಿ, ಎಂ.ಎಂ ಕಾಟುಂಗರೆ ಗುಡ್ಡೆ ಪಿ.ಎಚ್.ಅಬೂಬಕ್ಕರ್ ಹಾಜಿ, ಅಬ್ಬಾಸ್ ಹಾಜಿ ಪಿರಿಬೈಲು, ಬಿಜೆಎಂ ಅಜ್ಜಿನಡ್ಕ ಅಧ್ಯಕ್ಷ ಸುಲೈಮಾನ್ ಹಾಜಿ, ಎಂಎಸ್‌ಎಫ್ ಐಎನ್‌ಸಿ ಕೋ-ಓರ್ಡಿನೇಟರ್ ಬಶೀರ್ ಟಿ.ಕೆ, ಹಸನಬ್ಬ ಹಾಜಿ ಕೆ.ಸಿ. ನಗರ, ಜೆ.ಎಂ. ಮೇರಳ ಗುಡ್ಡೆ ಇಸ್ಮಾಯೀಲ್ ಹಾಜಿ ಕೊಪ್ಪಳ, ತಾಪಂ ಸದಸ್ಯ ಸಿದ್ದೀಖ್ ತಲಪಾಡಿ, ಎಂಎಸ್‌ಎಫ್ ತಲಪಾಡಿ ಉಪಾಧ್ಯಕ್ಷ ಕೆ.ಎಸ್.ಬಾವಾ ಹಾಜಿ, ಎಂಎಸ್‌ಎಫ್ ತಲಪಾಡಿ ಜೊತೆ ಕಾರ್ಯದರ್ಶಿ ಬಿಜೆಎಂ ಪಂಜಳ ಅಬ್ದುಲ್ ಖಾದರ್, ಸೋಮೇಶ್ವರ ಗ್ರಾಪಂ ರಫೀಕ್ ಕಾಟುಂಗರೆ ಗುಡ್ಡೆ, ಎಂ.ಎಂ. ಕಾಟುಂಗರೆ ಗುಡ್ಡೆ ಮಾಜಿ ಅಧ್ಯಕ್ಷ ಮೂಸ, ಪ್ರಧಾನ ಕಾರ್ಯದರ್ಶಿ ಯೂಸುಫ್, ಎಂಎಸ್‌ಎಫ್ ಕೋಶಾಧಿಕಾರಿ ಅಬ್ದುಲ್ ಹಮೀದ್ ಹಾಜಿ ಟಿ., ಸಮಾಜ ಸೇವಕ ಶಂಸುದ್ದೀನ್ ಉಚ್ಚಿಲ, ಮಾರ್ಕಝುಲ್ ಹುದಾ ಹಮೀದ್ ಸುಳ್ಯ ಉಪಸ್ಥಿತರಿದರು.

ಮಿನ್‌ಹಾಜು ಸ್ವಾಲಿಹತ್ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಹನೀಫ್ ಸಖಾಫಿ ಕಿನ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಫಾರೂಖ್ ಕೋಟೆಪುರ ವಂದಿಸಿದರು. ಮಾನ್ಯೇಜರ್ ಎಮ್ಮೆಸ್ಸೆಂ ಸಿರಾಜ್ ಕಾರ್ಯಕ್ರಮ ನಿರೂಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News