ಕಣ್ಣೂರು: ಹಜ್ ಯಾತ್ರಿಕರಿಗೆ ಸನ್ಮಾನ
Update: 2017-07-26 22:19 IST
ಮಂಗಳೂರು, ಜು.26: ಕಣ್ಣೂರು ಫ್ರೆಂಡ್ಸ್ ಸರ್ಕಲ್ ವತಿಯಿಂದ ಹಜ್‌ಗೆ ತೆರಳುವ ಹಜ್ಜಾಜ್‌ಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಅಡ್ಯಾರ್ ಕಣ್ಣೂರು ನಲ್ಲಿ ಬುಧವಾರ ನಡೆಯಿತು.
ಬದ್ರಿಯಾ ಕೇಂದ್ರ ಜುಮಾ ಮಸೀದಿಯ ಖತೀಬ್ ಅನ್ಸಾರ್ ಫೈಝಿ ಅಧ್ಯಕ್ಷತೆ ವಹಿಸಿ ದುಆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕಣ್ಣೂರು ಬದ್ರಿಯಾ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹ್‌ಮಾನ್ (ಸಿ.ಝಡ್.ಬೀಡಿ), ಕಮಿಟಿಯ ಸದಸ್ಯರಾದ ಹಾಜಿ ಅಬ್ದುಲ್ ರಹ್‌ಮಾನ್ (ನಸೀಮಾ ಬೀಡಿ), ಇಕ್ಬಾಲ್ ಎ.ಕೆ., ಅಬೂಬಕ್ಕರ್, ರಫೀಕ್ (ಇ.ಕೆ.ಟಿಂಬರ್),ಎಸ್.ಕೆ.ಶರೀಫ್, ಹಾಜಿ ಹಮೀದ್ ಬೆಂಗರೆ, ಸಾದಿಕ್ ಕಣ್ಣೂರು, ಬದ್ರುದ್ದೀನ್ ಕಣ್ಣೂರು, ಖಾಲೀದ್ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು.
ಕೆಎಫ್‌ಸಿ ಕಣ್ಣೂರು ಅಧ್ಯಕ್ಷ ಶರೀಫ್ ಕಣ್ಣೂರು (ಐಮೋನು) ಸ್ವಾಗತಿಸಿದರು. ಡಿಎಂ ರಿಯಾಝ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಮಾನಲಾ ವಂದಿಸಿದರು.