ಸಿರಿಯದ ಅಸಾದ್ ತಪ್ಪಿಸಿಕೊಳ್ಳಲು ಬಿಡಲಾರೆ: ಟ್ರಂಪ್

Update: 2017-07-26 17:06 GMT

ವಾಶಿಂಗ್ಟನ್, ಜು. 26: ಸಿರಿಯ ಅಧ್ಯಕ್ಷ ಬಶರ್ ಅಲ್ ಅಸಾದ್ ಮಾನವತೆಯ ವಿರುದ್ಧ ‘ಭಯಾನಕ’ ಅಪರಾಧಗಳನ್ನು ನಡೆಸಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ ಹಾಗೂ ಇನ್ನು ನಾಗರಿಕರ ವಿರುದ್ಧ ರಾಸಾಯನಿಕ ದಾಳಿ ನಡೆಸಲು ಬಿಡೆವು ಎಂದು ಘೋಷಿಸಿದ್ದಾರೆ.

ಶ್ವೇತಭವನದಲ್ಲಿ ಮಂಗಳವಾರ ಲೆಬನಾನ್ ಪ್ರಧಾನಿ ಸಅದ್ ಹರೀರಿ ಜೊತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಲೆಬನಾನ್‌ನ ಹಿಝ್ಬುಲ್ಲಾ ಸಂಘಟನೆಯೂ ಇಡೀ ಮಧ್ಯಪ್ರಾಚ್ಯಕ್ಕೆ ಬೆದರಿಕೆಯಾಗಿದೆ ಎಂದರು.

 ಟ್ರಂಪ್ ತನ್ನ ಓವಲ್ ಕಚೇರಿಯಲ್ಲಿ ಹರೀರಿಯನ್ನು ಭೇಟಿಯಾದ ಬಳಿಕ, ಲೆಬನಾನ್‌ಗೆ ನೀಡಲಾಗುತ್ತಿರುವ ಅಮೆರಿಕದ ಸೇನಾ ನೆರವನ್ನು ಮುಂದುವರಿಸಲಾಗುವುದು ಎಂದು ಘೋಷಿಸಿದರು.

‘‘ನಾನು ಅಸಾದ್‌ರ ಅಭಿಮಾನಿಯಲ್ಲ. ಆತ ತನ್ನ ದೇಶಕ್ಕೆ ಹಾಗೂ ಮಾನವತೆಗೆ ಭಯಾನಕ ಅಪರಾಧವನ್ನು ಮಾಡಿದ್ದಾರೆ’’ ಎಂದು ಟ್ರಂಪ್ ನುಡಿದರು.

ರಾಸಾಯನಿಕ ದಾಳಿಗಳನ್ನು ನಡೆಸಿರುವುದಕ್ಕಾಗಿ ಅಸಾದ್ ವಿರುದ್ಧ ಕ್ಷಿಪಣಿ ದಾಳಿಗಳನ್ನು ನಡೆಸಲು ತಾನು ಆದೇಶಿಸಿರುವುದನ್ನು ನೆನಪಿಸಿಕೊಂಡ ಟ್ರಂಪ್, ‘‘ಆತ ತಾನು ಮಾಡಿದ ಅಪರಾಧಗಳಿಂದ ತಪ್ಪಿಸಿಕೊಳ್ಳುವುದನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವ ವ್ಯಕ್ತಿ ನಾನಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News