ಶಿರ್ವ: ರಕ್ಷಕ ಶಿಕ್ಷಕ ಸಂಘದ ಸಭೆ
Update: 2017-07-27 19:19 IST
ಶಿರ್ವ, ಜು.27: ಶಿರ್ವ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಸಭೆಯು ಇತ್ತೀಚೆಗೆ ಜರಗಿತು.
ಅಧ್ಯಕ್ಷತೆಯನ್ನು ಶಾಲಾ ಉಪಾಧ್ಯಕ್ಷ ಶಬ್ಬೀ ಅಹಮದ್ ಖಾಝಿ ವಹಿಸಿದ್ದರು. ಶಾಲಾ ಸಂಚಾಲಕ ಮುಹಮ್ಮದ್ ಇಮ್ರಾನ್ ಮಾತನಾಡಿದರು. ಕಾರ್ಯದರ್ಶಿ ವಹೀದ್ ಅಹಮದ್, ಉಪಾಧ್ಯಕ್ಷ ಉಮ್ಮರ್ ಇಸ್ಮಾಯಿಲ್, ಜೊತೆ ಕಾರ್ಯ ದರ್ಶಿ ಮುಹಮ್ಮದ್ ಸಾದಿಕ್, ಸದಸ್ಯ ಸೈಯದ್ ಮುಜಾಫರ್ ಉಪಸ್ಥಿತರಿದ್ದರು.
ಭಟ್ಕಳ ದೀನಿಯಾತ್ ಅಕಾಡೆಮಿಯಿಂದ ಶಾಲೆಗೆ ದೊರೆತ ಆರು ಚಿನ್ನದ ನಾಣ್ಯಗಳು, 7 ಚಿನ್ನದ ಪದಕಗಳು ಮತ್ತು 17 ಬೆಳ್ಳಿಯ ಪದಕಗಳನ್ನು ವಿತರಿಸ ಲಾಯಿತು. ಪ್ರಾಂಶುಪಾಲ ಬಿ.ಎಂ.ಬೀರಾ ಮೊಯ್ದಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೌಲಾನ ಪರ್ವೇಜ್ ಆಲಂ ಕಿರಾತ್ ಪಠಿಸಿದರು. ಮುಖ್ಯೋಪಾಧ್ಯಾಯಿನಿ ಫೆಲಿಸಿಟಾಸ್ ಪಿರೇರಾ ಸ್ವಾಗತಿಸಿದರು. ಸಹ ಶಿಕ್ಷಕಿ ವಿಜಯ ವಂದಿಸಿದರು. ರೇವತಿ ಕಾರ್ಯಕ್ರಮ ನಿರೂಪಿಸಿದರು.