ಧರ್ಮಸಿಂಗ್ ನಿಧನಕ್ಕೆ ಪೇಜಾವರಶ್ರೀ ಸಂತಾಪ
Update: 2017-07-27 19:49 IST
ಉಡುಪಿ, ಜು.27: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ, ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ, ನಮ್ಮ ಅತ್ಯಂತ ಆತ್ಮೀಯರೂ ಆದ ಧರ್ಮಸಿಂಗರ ನಿಧನದಿಂದ ನಮಗೆ ಅತೀವ ಖೇದವಾಗಿದೆ. ಅವರ ಆತ್ಮಕ್ಕೆ ಶ್ರೀಕೃಷ್ಣ ಮುಖ್ಯಪ್ರಾಣರು ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇವೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸಂದೇಶದಲ್ಲಿ ತಿಳಿಸಿದ್ದಾರೆ.