×
Ad

ಬಿ.ಎಸ್ಸಿ. ದ್ವಿತೀಯ ಸೆಮಿಸ್ಟರ್ ಫಲಿತಾಂಶ

Update: 2017-07-27 20:08 IST

ಭಟ್ಕಳ,ಜು.27: ಸಿದ್ಧಾರ್ಧ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎಸ್ಸಿ. ದ್ವಿತೀಯ ಸೆಮಿಸ್ಟರ್ನ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಗೆ ಹಾಜರಾದ  12 ವಿದ್ಯಾರ್ಧಿಗಳಲ್ಲಿ 11 ವಿದ್ಯಾರ್ಧಿಗಳು ಉತ್ತೀರ್ಣರಾಗಿದ್ದು , 92% ಫಲಿತಾಂಶ ಬಂದಿರುತ್ತದೆ. 6 ವಿದ್ಯಾರ್ಧಿಗಳು ಡಿಸ್ಟಿಂಕ್ಷನ್ ಮತ್ತು 5 ವಿದ್ಯಾರ್ಧಿಗಳು ಪ್ರಧಮ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ.

ಸದರಿ ಪರೀಕ್ಷೆಯಲ್ಲಿ ಕು.ಅಶ್ವಿನಿ. ಜಿ. ಪೈ , ಪಿಸಿಎಂ ವಿಭಾಗದಲ್ಲಿ 98.22%, ಕು.ಲಾವಣ್ಯ. ಕೆ. ಮೊಗೇರ 96.22%, ಕು.ನಾಗರತ್ನ ಮೊಗೇರ 89.33%, ಕು.ಹರ್ಷಿತಾ ನಾಯ್ಕ 88.00%, ಕು.ಅಶ್ವಿನಿ ಎಂ. ನಾಯ್ಕ 84.00% ಪಡೆದಿರುತ್ತಾರೆ.

ಕು.ಜಗದೀಶ ನಾಯ್ಕ ಪಿಎಂಸಿಎಸ್ ವಿಭಾಗದಲ್ಲಿ 86.00% ಪಡೆದಿರುತ್ತಾನೆ.

ವಿದ್ಯಾರ್ಧಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News