×
Ad

ಮಹಿಳಾ ಗ್ರಾಮಕರಣಿಕರ ಮೇಲೆ ಹಲ್ಲೆ

Update: 2017-07-27 20:13 IST

ಬೆಳ್ತಂಗಡಿ, ಜು.27: ಮಹಿಳಾ ಗ್ರಾಮಕರಣಿಕ ಮೇಲೆ ವ್ಯಕ್ತಿಯೋರ್ವ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಹಲ್ಲೆ ನಡೆಸಿರುವ ಬಗ್ಗೆ ವೇಣೂರು ಠಾಣಾ ವ್ಯಾಪ್ತಿಯ ಬಳೆಂಜದಲ್ಲಿ ಮಂಗಳವಾರ ನಡೆದಿದೆ. ಕರ್ತವ್ಯದಲ್ಲಿದ್ದ ಬಳೆಂಜ ಗ್ರಾಮ ಗ್ರಾಮಕರಣಿಕ ಮೇಘನಾ(26) ಅವರ ಮೇಲೆ ಸ್ಥಳೀಯ  ನಿವಾಸಿ ಕಾಪಿನಡ್ಕ ಅಶೋಕ್ ಆಚಾರ್ಯ ಎಂಬವರು ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿರುವ ಘಟನೆ ಬಳೆಂಜ ಗ್ರಾಮರಣಿಕರ ಕಛೇರಿಯಲ್ಲಿ ನಡೆದಿದೆ.

ಮಂಗಳವಾರ ಮಧ್ಯಾಹ್ನ  ಗ್ರಾಮಕರಣಿಕರ ಕಛೇರಿಗೆ ಬಂದ ಅಶೋಕ್ ಆಚಾರ್ಯ ಅವರು ಯಾವುದೋ ಕಡತದ ಮಾಹಿತಿಯನ್ನು ಕೇಳಿದ್ದಾರೆ. ಅದಕ್ಕೆ ಕಾನೂನು ರೀತ್ಯಾ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಏಕಾಏಕಿ ಕೋಪಗೊಂಡ ಅಶೋಕ ಅವರು ಗ್ರಾಮಕರಣಿಕ ಮೇಘನಾ ಅವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಿಂದ ಆಘಾತಕ್ಕೆ ಒಳಗಾದ ಮೆಘನಾ ಅವರು  ರಕ್ತದೊತ್ತಡದಿಂದ ಅರೆಪ್ರಜ್ನಾ ಸ್ಥಿತಿಗೊಳಗಾಗಿದ್ದಾರೆ. ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಸ್ಡಿಎಮ್ ಆಸ್ಪತ್ರೆ ಇಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಮಾನಸಿಕವಾಗಿ ಆಘಾತಕೊಳ್ಳಗಾದ ಮೇಘನಾ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಘಟನೆಯ ವಿವರ ತಿಳಿಯುತ್ತಿದ್ದಂತೆ ಬೆಳ್ತಂಗಡಿ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಘಟನೆಯ ಬಗ್ಗೆ ವೇಣೂರು ಠಾಣೆಗೆ ದೂರು ನೀಡಲಾಗಿದೆ. 

ಖಂಡನೆ: ಕರ್ತವ್ಯದಲ್ಲಿದ್ದ ಬಳೆಂಜ ಗ್ರಾಮಕರಣಿಕರಾದ ಮೇಘನ ಅವರ ಮೇಲೆ ಹಲ್ಲೆ ಮಾಡಿದ ಕೃತ್ಯವನ್ನು ದಸಂಸ ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಂಘಟನಾ ಸಂಚಾಲಕರಾದ ಚಂದು ಎಲ್ , ತಾಲೂಕು ಮುಖಂಡರಾದ ಮುಖಂಡರಾದ ಬಿ. ಕೆ. ವಸಂತ್, ವೆಂಕಣ್ಣ ಕೊಯ್ಯೂರು, ಸೇಸಪ್ಪ ಅಳದಂಗಡಿ ಖಂಡಿಸಿ, ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News