ಅಗ್ರಹಾರ: ಜಂ-ಇಯ್ಯತುಲ್ ಮುಅಲ್ಲಿಮೀನ್ ನೂತನ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ, ಜುಲೈ. 27: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಾಮಾ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಬಂಟ್ವಾಳ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್‍ನ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅಗ್ರಹಾರ ಹಯಾತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಸ್ತ ತಪಾಸಣಾಧಿಕಾರಿ ತೆಕ್ಕಾರು ಉಮರುಲ್ ಫಾರೂಖ್ ವಹಿಸಿದ್ದರು. ಖತೀಬ್ ಹಂಝ ದಾರಿಮಿ ಉದ್ಘಾಟಿಸಿದರು,
ನೂತನ ಅಧ್ಯಕ್ಷರಾಗಿ ಪಾಂಡವರಕಲ್ಲು ಮುಅಲ್ಲಿಂ ಜಿ.ವೈ.ಅಬ್ದುಲ್ ರಝಾಕ್ ಮೌಲವಿ ಗೇರುಕಟ್ಟೆ, ಕಾರ್ಯದರ್ಶಿಯಾಗಿ ಪಿ.ಎಂ. ಯಹ್ಯಾ ಮುಸ್ಲಿಯಾರ್ ಮರ್ಧಾಳ, ಪರೀಕ್ಷಾ ಬೋರ್ಡ್ ಚೇಮ್ರ್ಯಾನಾಗಿ ಸಿದ್ದೀಖ್ ರಹ್ಮಾನಿ ಅಡೆಕ್ಕಲ್ ಪುನರಾಯ್ಕೆಗೊಂಡರು. ಉಪಾಧ್ಯಕ್ಷರುಗಳಾಗಿ ಅಯ್ಯೂಬ್ ಮುಸ್ಲಿಯಾರ್ ಅರಳ, ಹಂಝ ದಾರಿಮಿ ಅಗ್ರಹಾರ, ಜೊತೆಕಾರ್ಯದರ್ಶಿಗಳಾಗಿ ಹಂಝ ಮುಸ್ಲಿಯಾರ್ ಲೊರೆಟ್ಟೊ ಪದವು, ಹಮೀದ್ ದಾರಿಮಿ ಅಗ್ರಹಾರ, ವೈಸ್ ಚೇರ್ಮಾನಾಗಿ ಅನ್ವರ್ ಮುಸ್ಲಿಯಾರ್ ಮೈಂದಾಳ, ಎಸ್,ಬಿ.ವಿ. ಚೇರ್ಮಾನಾಗಿ ಶರೀಫ್ ದಾರಿಮಿ ಕಲ್ಲಗುಡ್ಡೆ, ಸಂಚಾಲಕರಾಗಿ ಆದಂ ಮುಸ್ಲಿಯಾರ್ ದೂಮಳಿಕೆ, ಮತ್ತು ಕೋಶಾಧೀಕಾರಿಯಾಗಿ ಮುಹಮ್ಮದ್ ಹಾಜಿ ಬಂಟ್ವಾಳರನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ರೇಂಜ್ ಕಾರ್ಯದರ್ಶಿ ಪಿ.ಎಂ. ಯಹ್ಯಾ ಮುಸ್ಲಿಯಾರ್ ಮರ್ಧಾಳ ಸ್ವಾಗತಿಸಿ ವಂದಿಸಿದರು.