ಅಕ್ರಮ ಗಾಂಜಾ ಸಾಗಾಟ: ಓರ್ವನ ಬಂಧನ
ಉಡುಪಿ, ಜು.27: ಅಕ್ರಮವಾಗಿ ಗಾಂಜಾ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಉಡುಪಿ ಡಿಸಿಐಬಿ ಪೊಲೀಸರು ಜು.26ರಂದು ಉಡುಪಿ ಕಲ್ಸಂಕ ರಾಯಲ್ ಗಾರ್ಡನ್ ಬಳಿ ಬಂಧಿಸಿದ್ದಾರೆ.
ಕಾಪು ಮಲ್ಲಾರು ಕೋಟೆ ರಸ್ತೆಯ ಉಬೇದುಲ್ಲಾ ಯಾನೆ ಮುಹಮ್ಮದ್ ಖಾಸಿಮ್(53) ಬಂಧಿತ ಆರೋಪಿ. ಈತನಿಂದ 45,000ರೂ. ವೌಲ್ಯದ 1,450 ಗ್ರಾಂ ತೂಕದ ಗಾಂಜಾ, ಬೈಕ್, ಎರಡು ಮೊಬೈಲ್, 2200ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ನಿರ್ದೇಶನದಲ್ಲಿ ಉಡುಪಿ ಡಿವೈಎಸ್ಪಿ ಎಸ್.ಜೆ.ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ದಾಳಿಯಲ್ಲಿ ಡಿಸಿಐಬಿ ಎಎಸ್ಸೈಗಳಾದ ರೊಸಾರಿಯೋ ಡಿಸೋಜ, ರವಿಚಂದ್ರ, ಸಿಬ್ಬಂದಿಗಳಾದ ಸುರೇಶ, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ಸಂತೋಷ ಕುಂದರ್, ರಾಘವೇಂದ್ರ ಉಪ್ಪುಂದ, ರಾಜ್ ಕುಮಾರ್, ದಯಾನಂದ ಪ್ರಭು, ಪ್ರವೀಣ, ಶಿವಾನಂದ, ಚಾಲಕ ರಾಘವೇಂದ್ರ ಪಾಲ್ಗೊಂಡಿದ್ದರು.