ಬಾವಿಗೆ ಬಿದ್ದು ಮಹಿಳೆ ಮೃತ್ಯು
Update: 2017-07-27 21:43 IST
ಶಂಕರನಾರಾಯಣ, ಜು.27: ಆವರಣ ಇಲ್ಲದ ಬಾವಿಗೆ ಬಿದ್ದು ಮಹಿಳೆ ಯೊಬ್ಬರು ಮೃತಪಟ್ಟ ಘಟನೆ ಉಳ್ಳೂರು 74ನೆ ಗ್ರಾಮದ ಬಂಟ್ರಗದ್ದೆ ಎಂಬಲ್ಲಿ ಜು.26ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಬಂಟ್ರಗದ್ದೆಯ ಗಿರಿಜಮ್ಮ ಶೆಡ್ತಿ(60) ಎಂದು ಗುರುತಿಸಲಾಗಿದೆ. ಇವರು ಗದ್ದೆಗೆ ಹೋಗಿ ಮನೆಯಲ್ಲಿರುವ ಜಾನುವಾರುಗಳಿಗೆ ಹಸಿ ಹುಲ್ಲನ್ನು ಕೊಯ್ದು ತಲೆಯಲ್ಲಿ ಹೊರೆಯನ್ನು ಹೊತ್ತುಕೊಂಡು ಬರುತ್ತಿರುವಾಗ ಗದ್ದೆ ಪಕ್ಕದಲ್ಲಿರುವ ಆವರಣ ಗೋಡೆ ಇಲ್ಲದ ಬಾವಿಗೆ ಕಾಲು ಜಾರಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.