ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
Update: 2017-07-27 21:44 IST
ಮಲ್ಪೆ, ಜು.27: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರದ ಅಲೆಯೊಂದು ನಾಡ ದೋಣಿಗೆ ಅಪ್ಪಳಿಸಿದ ಪರಿಣಾಮ ಓರ್ವ ಮೀನುಗಾರ ನೀರಿಗೆ ಬಿದ್ದು ಮೃತಪಟ್ಟ ಘಟನೆ ತೊಟ್ಟಂನ ಕಡಲ ಕಿನಾರೆಯಲ್ಲಿ ಜು.26ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಪ್ರಕಾಶ್(17) ಎಂದು ಗುರುತಿಸಲಾಗಿದೆ. ತೊಟ್ಟಂನ ಜನಾದರ್ನ ತಿಂಗಳಾಯ ಎಂಬವರ ನಾಡ ದೋಣಿಯಲ್ಲಿ ಈಶ್ವರ, ಸೂರ, ಪ್ರಕಾಶ್ ಮತ್ತು ಇತರೆ ಒರಿಸ್ಸಾ ಮೂಲದವರು ಮೀನುಗಾರಿಕೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ವಾಪಾಸ್ಸು ತೊಟ್ಟಂನ ಕಡಲ ಕಿನಾರೆಗೆ ಬರುವಾಗ ಬೃಹತ್ ಗ್ರಾತದ ಅಲೆ ದೋಣಿಗೆ ಅಪ್ಪಳಿಸಿತು.
ಇದರಿಂದ ದೋಣಿಯಲ್ಲಿದ್ದವರು ಸಮುದ್ರದ ನೀರಿಗೆ ಬಿದ್ದರು. ಅವರಲ್ಲಿ ಹೆಚ್ಚಿನವರು ಹಗ್ಗದ ಸಹಾಯದಿಂದ ದಡಕ್ಕೆ ಬಂದು ಸೇರಿದರೆ, ಪ್ರಕಾಶ್ ಮಾತ್ರ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದರು. ಬಳಿಕ ಅವರ ಮೃತದೇಹ ಅಲ್ಲೇ ಸಮೀಪ ಪತ್ತೆಯಾಯಿತು. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.