ಇಸ್ಲಾಂ ಹೆಸರಲ್ಲಿ ಅಮಾಯಕರನ್ನು ಹತ್ಯೆಗೈಯುವ ಉಗ್ರರು ಮುಸ್ಲಿಮರಲ್ಲ: ಇರಾಕ್ ಸಚಿವ

Update: 2017-07-27 16:38 GMT

ಮುಂಬೈ, ಜು. 27: ಇಸ್ಲಾಂ ಹೆಸರಲ್ಲಿ ಅಮಾಯಕ ಜನರನ್ನು ಹತ್ಯೆಗೈಯುವ ಉಗ್ರರನ್ನು ಮುಸ್ಲಿಮರು ಎಂದು ಹೇಳಲು ಸಾಧ್ಯವಿಲ್ಲ ಎಂದು ಇರಾಕ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಇಬ್ರಾಹಿಂ ಅಲ್ ಝಾಫಾರಿ ತಿಳಿಸಿದ್ದಾರೆ.

ಒಂದು ಉಗ್ರರ ಗುಂಪು ಇದೆ. ಅವರು ಇಸ್ಲಾಂ ಹೆಸರಲ್ಲಿ ಘೋಷಣೆ ಕೂಗುತ್ತಾರೆ. ಅವರು ಅಮಾಯಕ ಜನರ ಹತ್ಯೆ ನಡೆಸುತ್ತಿರುವುದರಿಂದ ಅವರು ಮುಸ್ಲಿಮರಲ್ಲ. ಅವರು ಮಹಿಳೆಯರು ಹಾಗೂ ಮಕ್ಕಳನ್ನು ಹತ್ಯೆಗೈಯುತ್ತಾರೆ. ಇದು ನಿಜವಾದ ಇಸ್ಲಾಂ ಅಲ್ಲ ಎಂದು ಅಲ್ ಝಾಪಾರಿ ತಿಳಿಸಿದ್ದಾರೆ.

ಭಾರತಕ್ಕೆ ಐದು ದಿನಗಳ ಭೇಟಿಗಾಗಿ ಅವರು ಇಲ್ಲಿಗೆ ಆಗಮಿಸಿದ್ದಾರೆ. ದಾವೂದಿ ಬೊಹ್ರಾ ಸಮುದಾಯದ ಆಹ್ವಾನದ ಮೇಲೆಗೆ ಅವರು ನಗರದಲ್ಲಿ ಒಂದು ದಿನ ಪ್ರವಾಸ ಕೈಗೊಂಡರು.

ಕುರ್‌ಆನ್‌ನ ಪವಿತ್ರ ಪಂಕ್ತಿಯನ್ನು ಉಲ್ಲೇಖಿಸಿದ ಅವರು, ಜನರಿಗೆ ಉತ್ತಮಿಕೆಗೆ ಯಾವುದು ಒಳ್ಳೆಯದೋ ಅದು ಉಳಿಯುತ್ತದೆ. ಸಾಮಾಜಕ್ಕೆ ಹಾನಿಕರವಾದುದು ನಾಶವಾಗುತ್ತದೆ ಎಂದರು.

ಮುಸ್ಲಿಮರು ಜಾತಿ, ನಂಬಿಕೆ ಪರಿಗಣಿಸದೆ ಜನರ ಕಲ್ಯಾಣ ಬಯಸಬೇಕು. ಇದು ಮುಸ್ಲಿಂ ಪದದ ನಿಜವಾದ ಅರ್ಥ ಎಂದು ಅವರು ಹೇಳಿದರು.

ಆರಂಭದಲ್ಲಿ ಅವರು ಭೆಂಡಿ ಬಝಾರ್‌ನಲ್ಲಿರುವ ದಾವೂದಿ ಬೋಹ್ರಾ ಸಮುದಾಯದ ಸಮಾಧಿ ರೌದತ್ ತೆಹ್ರಾಕ್ಕೆ ಭೇಟಿ ನೀಡಿದರು. ಅಲ್ಲಿ ದಾವೂದಿ ಬೊಹ್ರಾ ಸಮುದಾಯದ 51 ಹಾಗೂ 52ನೇ ನಾಯಕರ ಸಮಾಧಿಗೆ ಗೌರವ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News