ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಸ್ಟಾಲಿನ್ ಬಂಧನ

Update: 2017-07-27 17:32 GMT

ಕೋಯಂಬತ್ತೂರು, ಜು. 27: ತಮಿಳುನಾಡು ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆಯ ಕಾರ್ಯಕಾರಿ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಹಾಗೂ ಇತರ 100 ಮಂದಿ ಡಿಎಂಕೆ ಕಾರ್ಯಕರ್ತರನ್ನು ಕೊಯಂಬತ್ತೂರು ವಿಮಾನ ನಿಲ್ದಾಣದಿಂದ 15 ಕಿಲೋಮೀಟರ್ ದೂರದಲ್ಲಿರುವ ಕಾಣಿಯೂರ್‌ನಲ್ಲಿ ಗುರುವಾರ ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಮುಖ್ಯಮಂತ್ರಿ ಅಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಕ್ಷೇತ್ರವಾದ ಕಚರಾಯನ್ ಲೇಕ್‌ಗೆ ಭೇಟಿ ನೀಡುವ ಉದ್ದೇಶದಿಂದ ಸೇಲಂ ಕಡೆ ಸಂಚರಿಸುತ್ತಿದ್ದ ಸಂದರ್ಭ ಪೊಲೀಸರು ಅವರನ್ನು ಬಂಧಿಸಿದರು.

   ಕೆರೆಯಿಂದ ಹೂಳೆತ್ತುವ ವಿಚಾರದಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ನಡುವೆ ಇತ್ತೀಚೆಗೆ ಘರ್ಷಣೆ ನಡೆದಿತ್ತು. ನೀಟ್ ಅನ್ನು ವಿರೋಧಿಸಿ ಸೇಲಂನಲ್ಲಿ ಗುರುವಾರ ಮಾನವ ಸರಪಳಿ ಪ್ರತಿಭಟನೆಯಲ್ಲಿ ಅವರು ಪಾಲ್ಗೊಳ್ಳಲಿದ್ದರು. ಆದರೆ, ಪೊಲೀಸರು ಅನುಮತಿ ನೀಡಿಲ್ಲ. ಸೇಲಂ ಗ್ರಾಮೀಣ ಪ್ರದೇಶದಲ್ಲಿರುವ ಕೊಂಗಾಣಪುರಂನಲ್ಲಿರುವ ಕೆರೆಗೆ ಸ್ಟಾಲಿನ್ ಭೇಟಿ ನೀಡುವುದರಿಂದ ಎರಡು ಪಕ್ಷಗಳ ನಡುವೆ ಘರ್ಷಣೆ ಉಂಟಾಗಿ ಕಾನೂನು ಸುವ್ಯವಸ್ಥೆಗೆ ತೊಂದರೆ ಉಂಟಾಗಬಹುದು ಎಂದು ಆತಂಕಪಡಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News