ಕಾವ್ಯಾಳ ಅಸಹಜ ಸಾವಿನ ತನಿಖೆಗೆ ಸಿಪಿಐ ಒತ್ತಾಯ

Update: 2017-07-28 12:21 GMT

ಮಂಗಳೂರು, ಜು.28: ಪ್ರತಿಭಾವಂತೆ, ರಾಷ್ಟ್ರೀಯ ಕ್ರೀಡಾಪಟು, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಕಾವ್ಯಾಳು ಜುಲೈ 20ರಂದು ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಸೀರೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿರುವುದಾಗಿ ಶಿಕ್ಷಣ ಸಂಸ್ಥೆಯು ತಿಳಿಸಿದೆ. ಆದರೆ ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಅಸಹಜ ಸಾವೆಂದು ಹೇಳಿರುವ ಕಾರಣ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಿಪಿಐ ಒತ್ತಾಯಿಸಿದೆ.

ಹೆತ್ತ ಕರುಳಿನ ಈ ಮಾತುಗಳನ್ನು ಕೇಳಿದಾಗ ಕಾವ್ಯಳಾ ಸಾವು ಪ್ರೇರೇಪಿತ ಕೊಲೆಯಾಗಿರಬಹುದೆಂದು ಸಂಶಯಪಡಬೇಕಾಗಿದೆ. ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಈ ಹಿಂದೆಯೂ ಇಂತಹ ಅಸಹಜ ಸಾವುಗಳಾದರೂ ಸತ್ಯ ಹೊರಬಂದಿಲ್ಲ. ಪ್ರತಿಷ್ಟಿತ ಎಂಬ ಬಿರುದಿಗೆ ಹೆದರಿ ರಕ್ಷಕರು ಮೌನವಾಗಿದ್ದಾರೆ. ತಮ್ಮದೇ ಆದ ಕಾನೂನುಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿದೆ. ನಿಗದಿತ ಕೋರ್ಸುಗಳನ್ನು ನೀಡುವುದಾಗಿ ವಿದ್ಯಾರ್ಥಿಗಳನ್ನು ಅಕರ್ಷಿಸಿ ನಂತರ ಆ ಕೋರ್ಸುಗಳನ್ನು ಕೊಡದೆ, ಅವರಿಂದ ಪಡೆದ ಶುಲ್ಕ ಮತ್ತು ದೃಢೀಕರಣ ಪತ್ರಗಳನ್ನೂ ಹಿಂತಿರುಗಿಸದೆ ವಿದ್ಯಾರ್ಥಿಗಳನ್ನು ಹಿಂಸಿಸುತ್ತಿರುವ ಹಲವಾರು ಪ್ರಕರಣಗಳು ಬಗ್ಗೆ ಪ್ರತಿಷ್ಠಿತರೆನ್ನುವ ಕಾರಣಗಳಿಗಾಗಿ ಬಹಿರಂಗಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲ ಈ ವಿದ್ಯಾ ಸಂಸ್ಥೆಯ ಬಗ್ಗೆ ಹಾಗೂ ಕಾವ್ಯಳಾ ಅಸಹಜ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಸಿಪಿಐನ ಮಂಗಳೂರು ತಾಲೂಕು ಸಮಿತಿ ಕಾರ್ಯದರ್ಶಿ ವಿ.ಎಸ್. ಬೇರಿಂಜ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News