ಉಡುಪಿ: ಸಾಹಿತ್ಯೋತ್ಸವ- ಚೈತನ್ಯಶ್ರೀ ಪ್ರಶಸ್ತಿ ಪ್ರದಾನ

Update: 2017-07-28 13:11 GMT

ಉಡುಪಿ, ಜು. 27: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪೇಜಾವರ ಮಠ, ಮಂಗಳೂರು ಕಲ್ಕೂರ ಪ್ರತಿಷ್ಠಾನ ಹಾಗೂ ಕಥಾಬಿಂದು ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಚೈತನ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗುರುವಾರ ರಾಜಾಂಗಣದಲ್ಲಿ ಆಯೋಜಿಸಲಾಗಿತ್ತು.

ಲೇಖಕ ಪಿ.ವಿ.ಪ್ರದೀಪ್ ಕುಮಾರ್ ಅವರ ‘ಮರಣಗರ್ಭ’ ಕಾದಂಬರಿ ಯನ್ನು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಬಿಡುಗಡೆ ಗೊಳಿಸಿದರು. ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ ಸ್ವಾಮೀಜಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಧಾ ನಾಗೇಶ್, ಪ್ರಕೃತಿ, ತಾರಾನಾಥ ಬೋಳಾರ್, ಇನ್ನಾ ಉದಯಕುಮಾರ ಶೆಟ್ಟಿ, ಟಿ.ಎಸ್. ರಾಘವೇಂದ್ರ ರಾವ್, ಹೊನ್ನಯ್ಯ, ಕೆ.ಎಂ.ಉಡುಪ, ಉದಯಕುಮಾರ ಶೆಟ್ಟಿ, ಡಾ.ಜಿ.ಆರ್.ಶೆಟ್ಟಿ, ಬಾಲಕೃಷ್ಣ ವೈದ್ಯ, ಜಿ.ಆರ್.ಉಪಾಧ್ಯಾಯ ಅವರಿಗೆ ‘ಚೈತನ್ಯ ಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ದೇರಳಕಟ್ಟೆ ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರವೀಂದ್ರ ಶೆಟ್ಟಿ, ಪಾಣೆಮಂಗಳೂರಿನ ವೇದಮೂರ್ತಿ ಜನಾರ್ದನ ಭಟ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News