ಪ್ಲಾಸ್ಟಿಕ್ ನಿಷೇಧ ಅನುಷ್ಠಾನ

Update: 2017-07-28 14:58 GMT

ಉಡುಪಿ, ಜು.28: ಸರಕಾರ ಈಗಾಗಲೇ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ಆದೇಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವಂತೆ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಧೀನ ಕಾರ್ಯರ್ಶಿಗಳ ಅಧಿಸೂಚನೆ ಸ್ಪಷ್ಟಪಡಿಸಿದೆ.

ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳಿಗೂ ಅವಕಾಶವಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದ್ದು, ಕ್ಯಾರಿಬ್ಯಾಗ್‌ಗಳ ಮೇಲೆ ವಿವಿಧ ಚಿತ್ರ ಅಥವಾ ಅಕ್ಷರ ಮುದ್ರಣ ಮಾಡುವಾಗ ಅತ್ಯಂತ ವಿಷಕಾರಿ ವಸ್ತು ಸೀಸ ಬಳಕೆ ಅಪಾಯಕಾರಿ ಎಂದಿದೆ.

ಈ ಹಿನ್ನಲೆಯಲ್ಲಿ ಯಾವುದೇ ಅಂಗಡಿ, ಮಳಿಗೆ, ಮಾಲ್, ಮಾರುಕಟ್ಟೆ ಅಥವಾ ಸಾರ್ವಜನಿಕರಾಗಲೀ ಜೈವಿಕ ಆಧಾರಿತ ಎಂದು ಹೇಳಲ್ಪಡುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ಮಾರಾಟ ಮಾಡುವುದಾಗಲೀ, ಬಳಕೆ ಮಾಡು ವುದಾಗಲೀ ಅಥವಾ ಉತ್ಪಾದನೆ ಮಾಡುವುದಾಗಲಿ ಕಂಡುಬಂದರೆ ಕಠಿಣ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News