6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಉಡುಪಿ, ಜು.28: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2017 -18ನೆ ಸಾಲಿಗೆ ಉಡುಪಿ ಜಿಲ್ಲಾ ಕೇಂದ್ರ ಸ್ಥಾನಕ್ಕೆ ಹೊಸದಾಗಿ ಮಂಜೂರಾದ ಮೌಲಾನಾ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ಪ್ರವೇಶಕ್ಕೆ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌಧ್ಧ ಸಿಖ್ ಮತ್ತು ಪಾರ್ಸಿ ಧರ್ಮದವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಶಾಲೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಶೇ.75 ಸ್ಥಾನ ಹಾಗೂ ಇತರಿಗೆ ಶೇ.25 ಸ್ಥಾನಗಳು ಮೀಸಲಾಗಿವೆ. ಪ್ರತಿ ತರಗತಿಯಲ್ಲಿ ಹೆಣ್ಣು ಮಕ್ಕಳಿಗೆ ಶೇ.50ರಷ್ಠು ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಪ್ರತೀ ತರಗತಿ 60 ಸಂಖ್ಯಾಬಲ ಹೊಂದಿದ್ದು, ಇದು ವಸತಿ ರಹಿತ ಶಾಲೆಯಾಗಿದೆ.
ಇದರಲ್ಲಿ ಅಂಗವಿಕಲ, ಅನಾಥ, ಪೌರಕಾರ್ಮಿಕರ ಮಕ್ಕಳಿಗೆ ಮೀಸಲಾತಿ ಇರುತ್ತದೆ. ಅರ್ಜಿ ಸಲ್ಲಿಸಲು ಆ.28 ಕೊನೆಯ ದಿನವಾಗಿರುತ್ತದೆ. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ, ಉಡುಪಿ ತಾಪಂ ಕಂಪೌಂಡ್ ಉಡುಪಿ-576101 ದೂರವಾಣಿ 0820-2520739, ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಕೊಠಡಿ ಸಂಖ್ಯೆ ಬಿ307, ಬಿ ಬ್ಲಾಕ್ 2ನೇ ಮಹಡಿ, ‘ರಜತಾದ್ರಿ’ ಮಣಿಪಾಲ-576104 ದೂರವಾಣಿ:0820-2574596, ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ನೆಲಮಹಡಿ, ಮಿನಿ ವಿಧಾನಸೌಧ, ತಾಲೂಕು ಕಚೇರಿ ಕಂಪೌಂಡ್, ಕಾರ್ಕಳ- 574104 ಅಥವಾ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, 1ನೇ ಮಹಡಿ, ಶ್ರೀಗಣೇಶ್ ಕಾಂಪ್ಲೆಕ್ಸ್, ಶ್ರೀ ಕುಂದೇಶ್ವರ ದೇವಸ್ಥಾನ ಹಿಂಬಾಗ, ಬರೆಕಟ್ಟು ರಸ್ತೆ, ಕುಂದಾಪುರ -576201 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.