ಅರ್ಜಿ ಆಹ್ವಾನ
Update: 2017-07-28 20:40 IST
ಉಡುಪಿ, ಜು.28: ಕಾರ್ಕಳದಲ್ಲಿ ಹೊಸದಾಗಿ ಆರಂಭಗೊಂಡಿರುವ ಸರಕಾರಿ ಕೈಗಾರಿಕಾ ಸಂಸ್ಥೆಯಲ್ಲಿ 2017-18ನೇ ಸಾಲಿನ ಪ್ರವೇಶಕ್ಕಾಗಿ ಎಸೆಸೆಲ್ಸಿ ತೇರ್ಗಡೆಗೊಂಡಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ, ಆಸಕ್ತ ಅ್ಯರ್ಥಿಗಳು ಜು.31ರವರೆಗೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪೆರ್ಡೂರು ಇಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸರಕಾರಿ ಕೈಗಾರಿಕಾ ಸಂಸ್ಥೆ ಕಾರ್ಕಳದಲ್ಲಿ ಎಸ್‌ಸಿವಿಟಿಯಡಿಯಲ್ಲಿ ಫಿಟ್ಟರ್, ಇಲೆಕ್ಟ್ರಿಷಿಯನ್, ಇ.ಎಂ, ಎಂ.ಆರ್.ಎ.ಸಿ, ಹಾಗೂ ಎಂ.ಎಂ.ವಿ ವೃತ್ತಿಗಳಲ್ಲಿ ಘಟಕ 1ರಲ್ಲಿ, 21 ಸ್ಥಾನಗಳಲ್ಲಿ ತರಬೇತಿ ನಡೆಯಲಿದೆ.
ಅಭ್ಯರ್ಥಿಗಳು ಎಸೆಸೆಲ್ಸಿ ಪಾಸಾಗಿರಬೇಕು ಹಾಗೂ ಕರ್ನಾಟಕದಲ್ಲಿ 5 ವರ್ಷ ವಿದ್ಯಾಭ್ಯಾಸ ಮಾಡಿರಬೇಕು. ಹೆಚ್ಚಿನ ಮಾಹಿತಿಗೆ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ, ಪೆರ್ಡೂರು ಇವರನ್ನು ಅಥವಾ ದೂರವಾಣಿ ಸಂಖ್ಯೆ 0820-2543485ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.