×
Ad

ಅಕ್ರಮ ಮರದ ದಿಮ್ಮಿ ಸಾಗಾಟದ ಆರೋಪ: ಲಾರಿ ವಶ

Update: 2017-07-28 20:54 IST

ಬಂಟ್ವಾಳ, ಜು. 28: ಅಕ್ರಮವಾಗಿ ಸಾಗಿಸುತ್ತಿದ್ದ ಮರದ ದಿಮ್ಮಿಗಳನ್ನು ಲಾರಿ ಸಮೆತ ವಶಕ್ಕೆ ಪಡೆದ ಬಂಟ್ವಾಳ ವಲಯ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಲೆತ್ತೂರು ನಿವಾಸಿ ಮುಹಮ್ಮದ್ ಎಂಬವರಿಗೆ ಸೇರಿದ ಲಾರಿಯನ್ನು ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ಶುಕ್ರವಾರ ವಶಕ್ಕೆ ಪಡೆಯಲಾಗಿದ್ದು,  ಅವುಗಳ ಒಟ್ಟು ಮೌಲ್ಯ 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಬಿ.ಸುರೇಶ್, ಉಪ ವಲಯ ಅರಣ್ಯಾಧಿಕಾರಿ ಪ್ರೀತಮ್ ಎಸ್., ಅರಣ್ಯ ರಕ್ಷಕರಾದ ವಿನಯ ಕುಮಾರ್, ಜಿತೇಶ್ ಪಿ., ದೇಜಪ್ಪ ಹಾಗೂ ಸಿಬ್ಬಂದಿ ಪ್ರವೀಣ್, ಜಯರಾಮ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News