ಚೈನ್ ಕಿತ್ತು ಪರಾರಿ ಪ್ರಕರಣ: ಆರೋಪಿ ಸೆರೆ
Update: 2017-07-28 21:58 IST
ಮಂಗಳೂರು, ಜು. 28: ಕಾಲೇಜು ಯುವತಿಯರಿಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ವೇಳೆ ಅವರ ಕುತ್ತಿಗೆಯಲ್ಲಿದ್ದ ಚೈನ್ ಎಗರಿಸಿ ಪರಾರಿಯಾದ ಯುವಕನೋರ್ವನನ್ನು ಉರ್ವ ಠಾಣಾ ಪೊಲೀಸರು ಶುಕ್ರವಾರ ಲೇಡಿಹಿಲ್‌ನಲ್ಲಿ ಬಂಧಿಸಿದ್ದಾರೆ.
ಭದ್ರಾವತಿ ಜಾಣಪುರ ನಿವಾಸಿ ಇಸ್ಮಾಯೀಲ್ (26) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಜು. 26ರಂದು ರಾತ್ರಿ 9ಗಂಟೆಯ ಸುಮಾರಿಗೆ ಕೊಟ್ಟಾರ ಸಮೀಪದ ದ್ವಾರಕಾನಗರದಲ್ಲಿ ಯುವತಿಯರಿಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಚೈನ್ ಎಗರಿಸಿ ಪರಾರಿಯಾಗಿದ್ದ. ಈ ಬಗ್ಗೆ ಯುವತಿಯರು ಉರ್ವ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಲೇಡಿಹಿಲ್ ಬಳಿಯಲ್ಲಿ ಆರೋಪಿಯನ್ನು ಬಂಧಿಸಿ ಚೈನ್ ವಶಪಡಿಸಿಕೊಂಡಿದ್ದಾರೆ.