ಬಾಲಿವುಡ್ ನಟ ಇಂದರ್ ಕುಮಾರ್ ನಿಧನ

Update: 2017-07-28 16:52 GMT

ಮುಂಬೈ, ಜು. 28: ವಾಂಟೆಡ್ ಚಿತ್ರದಲ್ಲಿ ಸಲ್ಮನ್ ಖಾನ್‌ನೊಂದಿಗೆ ನಟಿಸಿದ ಬಾಲಿವುಡ್ ನಟ ಇಂದರ್ ಕುಮಾರ್ ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ಮುಂಬೈಯಲ್ಲಿರುವ ತನ್ನ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಅವರು ಪತ್ನಿ ಪಲ್ಲವಿ ಸರಾಫ್ ಹಾಗೂ ಪುತ್ರಿ ಭುವನ ಅವರನ್ನು ಅಗಲಿದ್ದಾರೆ.

ಅಂಧೇರಿಯ ತನ್ನ ನಿವಾಸದಲ್ಲಿ 43ರ ಹರೆಯದ ನಟನಿಗೆ ಬೆಳಗ್ಗೆ ಹೃದಯಾಘಾತ ಸಂಭವಿಸಿತು. ಅವರು ಕೆಲವು ದಿನಗಳಿಂದ ಹೃದಯ ಸಂಬಂಧಿ ಖಾಯಿಲೆಯಿಂದ ನರಳುತ್ತಿದ್ದರು. ಇಂದರ್ ಅವರ ಶವಸಂಸ್ಕಾರ ಯಾರಿ ರಸ್ತೆಯ ಸ್ಮಶಾನದಲ್ಲಿ ಶುಕ್ರವಾರ ಸಂಜೆ ನಡೆಯಿತು.

ವಾಂಟೆಡ್, ತುಮ್ಕೋ ನಾ ಭೋಲ್ ಪಾಯೇಂಗೆ, ಕಾಹಿನ್ ಪ್ಯಾರ್ ನಾ ಹೋ ಜಯೇ, ಖಿಲಾಡಿಯೋನ್ ಕಾ ಖಿಲಾಡಿ, ಗಜ ಗಾಮಿನಿ, ಮಾ ತುಜೇ ಸಲಾಂ ಮಾಸೂಮ್ ಮೊದಲಾದ ಚಿತ್ರಗಳಲ್ಲಿ ಇಂದರ್ ಕುಮಾರ್ ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News