ಅಫ್ಘಾನ್‌ನಲ್ಲಿ ಭಾರತದ ಪಾತ್ರ ಹೆಚ್ಚಿಸಲು ಅಮೆರಿಕ ಸೆನೆಟರ್‌ಗಳ ಆಗ್ರಹ

Update: 2017-07-29 14:19 GMT

ವಾಶಿಂಗ್ಟನ್, ಜು. 29: ಅಫ್ಘಾನಿಸ್ತಾನದಲ್ಲಿ ಭಾರತದೊಂದಿಗಿನ ಸಹಕಾರವನ್ನು ವೃದ್ಧಿಸುವಂತೆ ಅಮೆರಿಕ ಸೆನೆಟರ್‌ಗಳ ಗುಂಪೊಂದು ಸರಕಾರವನ್ನು ಒತ್ತಾಯಿಸಿದೆ.

 ಸೆನೆಟರ್‌ಗಳು ತಮ್ಮ ಬೇಡಿಕೆಗೆ ಪೂರಕವಾಗಿ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆ (ಎನ್‌ಡಿಎಎ)- 2018ಕ್ಕೆ ಶಾಸನಾತ್ಮಕ ತಿದ್ದುಪಡಿಯೊಂದನ್ನು ಸೆನೆಟ್‌ನಲ್ಲಿ ಮಂಡಿಸಿದ್ದಾರೆ.ಯುದ್ಧಗ್ರಸ್ತ ಅಫ್ಘಾನಿಸ್ತಾನಕ್ಕೆ ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿ ನೆರವನ್ನು ನೀಡುವ ದೇಶಗಳ ಪೈಕಿ ಭಾರತವೂ ಒಂದಾಗಿದೆ.

ವಸ್ತುಗಳ ಪೂರೈಕೆ, ಬೆದರಿಕೆ ವಿಶ್ಲೇಷಣೆ, ಗುಪ್ತಚರ, ಸಾಮಗ್ರಿ ಮತ್ತು ನಿರ್ವಹಣೆಯ ಮೂಲಕ ಅಫ್ಘಾನ್ ಭದ್ರತಾ ಪಡೆಗಳಿಗೆ ನೆರವು ನೀಡುವ ಭಾರತದ ಪಾತ್ರವನ್ನು ವೃದ್ಧಿಸುವಂತೆ ತಿದ್ದುಪಡಿ ಕೋರಿದೆ.ತಿದ್ದುಪಡಿಯು ಸೆನೆಟ್‌ನಲ್ಲಿ ಅಂಗೀಕಾರಗೊಂಡರೆ ಹಾಗೂ ಅಮೆರಿಕ ಮತ್ತು ಭಾರತ ಅದನ್ನು ಜಾರಿಗೊಳಿಸಿದರೆ ಅದು ಪಾಕಿಸ್ತಾನಕ್ಕೆ ಅಸಹನೀಯವಾಗಬಹುದು ಎಂದುದ ಭಾವಿಸಲಾಗಿದೆ. ಯಾಕೆಂದರೆ ಅಫ್ಘಾನಿಸ್ತಾನದಲ್ಲಿ ಭಾರತದ ಯಾವುದೇ ಪಾತ್ರವನ್ನು ಅದು ವಿರೋಧಿಸುತ್ತದೆ.

ಸೆನೆಟರ್‌ಗಳಾದ ಡಾನ್ ಸಲಿವನ್, ಗ್ಯಾರಿ ಪೀಟರ್ಸ್, ಜಾನ್ ಕಾರ್ನಿನ್ ಮತ್ತು ಮಾರ್ಕ್ ವಾರ್ನರ್ ಗುರುವಾರ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News