ಜನಪದ ಕಲೆಗಳ ಸರ್ಟಿಫಿಕೇಟ್ ಕೋರ್ಸ್ ಆರಂಭ
ಉಡುಪಿ, ಜು.29: ಆಧುನಿಕತೆಯ ಭರಾಟೆ ಮಧ್ಯೆ ನಮ್ಮದಾದ ಜನಪದ ಕಲೆ-ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು, ಇದನ್ನು ಯುವ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಜನಪದ ಕಲೆಗಳ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕುಸುಮಾ ಕಾಮತ್ ಹೇಳಿದ್ದಾರೆ.
ಆಸಕ್ತ ಯುವಜನಾಂಗಕ್ಕೆ ನಮ್ಮ ವಿಶಿಷ್ಟವಾದ ಜನಪದ ಕಲೆ-ಸಂಸ್ಕೃತಿಗಳನ್ನು ಕಲಿಸಿಕೊಡುವುದರಿಂದ ಅದನ್ನು ಮುಂದಿನ ಪೀಳಿಗೆಗೂ ದಾಟಿಸುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ಸಂಸ್ಕೃತಿಯ ಉಳಿವು, ಅವುಗಳ ಬೆಳವಣಿಗೆಗೆ ಪೂರಕ ವಾದ ಈ ಸರ್ಟಿಫಿಕೇಟ್ ಕೋರ್ಸ್‌ನ ಸದುಪಯೋಗವನ್ನು ವಿದ್ಯಾರ್ಥಿಗಳು ಸಾಧ್ಯವಿದ್ದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕಾಗಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ. ವರದೇಶ್ ಹಿರೇಗಂಗೆ, ನಶಿಸಿಹೋಗುತ್ತಿರುವ ನಮ್ಮ ಜನಪದರು ಮತ್ತು ಜನಪದ ಕಲೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿ, ಹೆಚ್ಚಿನ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವುದೇ ಈ ಕೋರ್ಸಿನ ಉದ್ದೇಶ ಎಂದರು.
ವಿದೇಶಿ ವಿದ್ವಾಂಸರೇ ನಮ್ಮ ಜನಪದ ಕಲೆಗಳ ಕುರಿತು ಆಸಕ್ತಿ ತೋರಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ನಮ್ಮ ಇಂದಿನ ಯುವ ಪೀಳಿಗೆಗೆ ಇದರ ಪರಿಚಯವೇ ಇಲ್ಲ ಎಂದೇ ಹೇಳಬೇಕು. ಜನಪದಗಳ ಹಿನ್ನೆಲೆ, ಅವುಗಳ ಕಲಾತ್ಮಕ ಅಂಶಗಳ ಕುರಿತು ಅಧ್ಯಯನ ನಡೆಯಬೇಕಾದ ಅಗತ್ಯವಿದೆ. ಇದೊಂದು ಜ್ಞಾನಸಾಗರವಿದ್ದಂತೆ. ಅವುಗಳ ಅಧ್ಯಯನ ನಡೆಸಿ ಉಳಿಸಿ ಬೆಳೆಸ ಬೇಕಾಗಿದೆ ಎಂದು ಪ್ರೊ.ಹಿರೇಗಂಗೆ ನುಡಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ಕು.ಶಿ.ಹರಿದಾಸ ಭಟ್ಟರು ಬಹು ಹಿಂದೆಯೇ ಈ ಕೋರ್ಸ್‌ನ್ನು ಆರಂಭಿಸುವ ಚಿಂತನೆ ನಡೆಸಿದ್ದರು. ಅವರ ಅಂದಿನ ಕನಸು ಮೂರು ದಶಕಗಳ ಬಳಿಕ ನನಸಾಗುತ್ತಿದೆ. ಇದರ ಪಠ್ಯಕ್ರಮದಲ್ಲಿ ಜನಪದ ಕಲೆಗಳ ಉಗಮ ಮತ್ತು ಬೆಳವಣಿಗೆ, ಭೂತಾರಾಧನೆ, ಸಿರಿ, ನಾಗಾರಾಧನೆ, ಜನಪದ ನೃತ್ಯ ಹಾಗೂ ಆಟಗಳ ಕುರಿತು ಪ್ರಾಯೋಗಿಕ ಶಿಕ್ಷಣ ವಿರುತ್ತದೆ ಎಂದು ಕೇಂದ್ರದ ಸಹಸಂಯೋಜಕ ಡಾ. ಅಶೋಕ್ ಆಳ್ವ ನುಡಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ಕು.ಶಿ.ಹರಿದಾಸ ಭಟ್ಟರು ಬಹು ಹಿಂದೆಯೇ ಈ ಕೋರ್ಸ್‌ನ್ನು ಆರಂಭಿಸುವ ಚಿಂತನೆ ನಡೆಸಿದ್ದರು. ಅವರ ಅಂದಿನ ಕನಸು ಮೂರು ದಶಕಗಳ ಬಳಿಕ ನನಸಾಗುತ್ತಿದೆ. ಇದರ ಪಠ್ಯಕ್ರಮದಲ್ಲಿ ಜನಪದ ಕಲೆಗಳ ಉಗಮ ಮತ್ತು ಬೆಳವಣಿಗೆ, ಭೂತಾರಾನೆ, ಸಿರಿ, ನಾಗಾರಾನೆ, ಜನಪದ ನೃತ್ಯ ಹಾಗೂ ಆಟಗಳ ಕುರಿತು ಪ್ರಾಯೋಗಿಕ ಶಿಕ್ಷಣವಿರುತ್ತದೆ ಎಂದು ಕೇಂದ್ರದ ಸಹಸಂಯೋಜಕ ಡಾ. ಅಶೋಕ್ ಆಳ್ವ ನುಡಿದರು.
ವೇದಿಕೆಯಲ್ಲಿ ಪ್ರೊ. ಕೊಕ್ಕರ್ಣೆ ಸುರೇಂದ್ರ ಶೆಟ್ಟಿ, ಡಾ.ಪುತ್ತಿ ವಸಂತ ಕುಮಾರ್ ಉಪಸ್ಥಿತರಿದ್ದರು. ವೆಂಕಟೇಶ್ ಸ್ವಾಗತಿಸಿ, ಲಚ್ಚೇಂದ್ರ ವಂದಿಸಿದರು. ಸುಲೋಚನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಾನಪದ ಕಲೆಗಳಿಗೆ ಸಂಬಂಧಿಸಿದಂತೆ ವಿಡಿಯೋ ಚಿತ್ರಗಳನ್ನು ಪ್ರದರ್ಶಿಸಲಾಯಿತು.