ಅನಾಥ ವೃದ್ದರಿಗೆ ಸ್ಫೂರ್ತಿಧಾಮ ಆಸರೆ
Update: 2017-07-29 20:42 IST
ಕೋಟೇಶ್ವರ, ಜು.29: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟ ಪಡುಕೆರೆಯಲ್ಲಿ ಅನಾಥ ಸ್ಥಿತಿಯಲ್ಲಿ ಅಲೆಯುತಿದ್ದ 65 ವರ್ಷ ಪ್ರಾಯದ ಭಾಸ್ಕರ ಪೂಜಾರಿ ಎಂಬವರನ್ನು ಸಾರ್ವಜನಿಕರು ರಕ್ಷಿಸಿ ಕೋಟ ಆರಕ್ಷಕರ ಮೂಲಕ ಸ್ಫೂರ್ತಿಧಾಮಕ್ಕೆ ದಾಖಲಿಸಿದ್ದಾರೆ.
ಇವರ ಪರಿಚಯ ಇರುವವರು ಸ್ಫೂರ್ತಿಧಾಮವನ್ನು ಸಂಪರ್ಕಿಸುವಂತೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಕೇಶವ ಕೋಟೇಶ್ವರ ತಿಳಿಸಿದ್ದಾರೆ