×
Ad

ಮುಲ್ಕಿ ಸುಂದರ ರಾಮ ಶೆಟ್ಟಿ ದ.ಕ. ಜಿಲ್ಲೆಯ ಜಾತ್ಯತೀತ ನೆಲೆಯ ಮಹಾನ್ ಸಾಧಕ-ಏರ್ಯಲಕ್ಷ್ಮೀ ನಾರಾಯಣ ಆಳ್ವ

Update: 2017-07-29 21:27 IST

ಮಂಗಳೂರು, ಜು. 29: ಮುಲ್ಕಿ ಸುಂದರ ರಾಮ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಸುಧಾರಣೆಯ ಸಂದರ್ಭದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ಮಹಾನ್ ಸಾಧಕ ಮತ್ತು ಜಾತ್ಯತೀತ ನೆಲೆಯ ಮೇರು ವ್ಯಕ್ತಿತ್ವವನ್ನು ಹೊಂದಿರುವ ಮಹಾನ್ ವ್ಯಕ್ತಿ ಎಂದು ಸಹಕಾರಿ ರಂಗದ ಧುರೀಣ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ತಿಳಿಸಿದ್ದಾರೆ.

ಮುಲ್ಕಿ ಸುಂದರಾಮ ಶೆಟ್ಟಿ ಅಭಿಮಾನಿ ಬಳಗ ಮತ್ತು ವಿಜಯ ಬ್ಯಾಂಕ್ ವರ್ಕರ್ಸ್‌ ಹಾಗೂ ಆಫಿಸರ್ಸ್‌ ಯೂನಿಯನ್ ಮಂಗಳೂರು ಇದರ ವತಿಯಿಂದ ಹಮ್ಮಿಕೊಂಡ ‘ಮುಲ್ಕಿ ಸಂದರಾಮ ಶೆಟ್ಟಿ ಸಂಸ್ಮರಣೆ 2017’ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶದ ಅಗ್ರಗಣ್ಯ ಸಾಧಕರಾಗಿರುವ ಕರಾವಳಿಯ ಹೆಮ್ಮೆಯ ಸಾಮಾಜಿಕ ನೇತಾರ ದಿ.ಮುಲ್ಕಿ ಸುಂದರಾಮ ಶೆಟ್ಟಿ ಜಿಲ್ಲೆಯ ಜನರು ಉದ್ಯೋಗದ ಸಮಸ್ಯೆಯಲ್ಲಿದ್ದಾಗ ಎಲ್ಲಾ ಜಾತಿಯ ಬಡ ಜನರಿಗೆ ಉದ್ಯೋಗ ನೀಡಿದ ಮಹಾನ್ ವ್ಯಕ್ತಿ ಒಂದೇ ದಿನ 27 ಬ್ಯಾಂಕ್ ಶಾಖೆಗಳನ್ನು ತೆರದ ಸಾಧಕರಾಗಿದ್ದರು. ಅವರಂತಹ ಮಹಾನ್ ಸಾಧಕನ ಹೆಸರಲ್ಲಿ ಮತ್ತು ಅಲೊಶಿಯಸ್‌ ಕಾಲೇಜಿನಂತಹ ಮಹಾನ್ ಸಂಸ್ಥೆಯ ಹೆಸರನ್ನು ಮುಂದಿಟ್ಟುಕೊಂಡು ಕೆಲವರು ರಸ್ತೆಗೆ ಹೆಸರಿಡುವ ರಾಜಕೀಯ ಮಾಡುವುದು ಸರಿಯಲ್ಲ ಅದು ನೋವು ತರುವ ವಿಚಾರವಾಗಿದೆ ಎಂದು ಏರ್ಯಲಕ್ಷ್ಮೀ ನಾರಾಯಣ ರಾವ್ ತಿಳಿಸಿದರು.

ಮುಲ್ಕಿ ಸುಂದರಾಮ ಶೆಟ್ಟಿ ರಸ್ತೆ ನಾಮಕರಣಕ್ಕೆ ಹಕ್ಕೊತ್ತಾಯ :- ನಗರದ ಎಲ್.ಎಚ್. ಎಚ್. ರಸ್ತೆಗೆ ಮುಲ್ಕಿ ಸುಂದರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡುವ ಪ್ರಕ್ರೆಯೆಗೆ ಎಲ್ಲಾ ಪ್ರಕ್ರೆಯೆಗಳು ಅಂತಿಮ ಹಂತದಲ್ಲಿದ್ದಾಗ ಕೊನೆ ಕ್ಷಣದಲ್ಲಿ ಸರಕಾರದಿಂದ ನೀಡಿರುವ ತಡೆಯಾಜ್ಞೆ ಯನ್ನು ತೆರವುಗೊಳಿಸಲು ಹಕ್ಕೊತ್ತಾಯದ ಹೋರಾಟ ಮುಂದುವರಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಜಾತಿ ರಾಜಕೀಯ ಮಾಡಿಲ್ಲ ಎಂದು ಮುಲ್ಕಿ ಸುಂದರಾಮ ಶೆಟ್ಟಿ ಅಭಿಮಾನಿ ಬಳಗದ ಕಾರ್ಯಾಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸಭೆಗೆ ತಿಳಿಸಿದ್ದಾರೆ.

ಮುಲ್ಕಿ ಸುಂದರಾಮ ಶೆಟ್ಟಿ ಅವರ ಹೆಸರನ್ನು ಲೈಟ್ ಹೌಸ್ ಹಿಲ್ ರಸ್ತೆಗೆ ನಾಮಕರಣ ಮಾಡುವ ಬಗ್ಗೆ 2009ರಲ್ಲಿ ಪ್ರಕ್ರೀಯೆ ನಡೆದು ಮನಪಾ ವತಿಯಿಂದ ಸಾರ್ವಜನಿಕರ ಆಕ್ಷೇಪಣೆಯನ್ನು ಕೋರಲಾಗಿತ್ತು. ಆಗ ಯಾರೂ ಆಕ್ಷೇಪಣೆ ಸಲ್ಲಿಸದೇ ಇದ್ದ ಕಾರಣ ನಾಮಕರಣದ ಪ್ರಕ್ರೆಯೆಯನ್ನು ಕೈ ಗೆತ್ತಿಕೊಳ್ಳಲಾಗಿತ್ತು. ಅಂತಿಮ ಕ್ಷಣದಲ್ಲಿ ಈ ರೀತಿಯ ಸಮಸ್ಯೆ ಉಂಟುಮಾಡಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಅಮರನಾಥ ಶೆಟ್ಟಿ ತಿಳಿಸಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಾ, ಸುಂದರ ರಾಮ ಅವರ ಹೆಸರನ್ನು ರಸ್ತೆಗೆ ಇಡುವ ವಿಚಾರ ಚರ್ಚೆಯ ವಿಷಯವಾಗಬಾರದು ಅವರು ಎಲ್ಲರಿಗೂ ಆರ್ಥಿಕ ಸಶಕ್ತತೆಗೆ ನೀಡಲು ಶ್ರಮಿಸಿದ ವ್ಯಕ್ತಿ ಎಂದು ತಿಳಿಸಿದರು. ವಿಜಯ ಬ್ಯಾಂಕ್ ಆಫಿಸರ್ಸ್‌ ಯೂನಿಯನ್‌ನ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಸೀತಾ ಚರಣ್ ಶೆಟ್ಟಿ, ರಘುರಾಮ ಸುವರ್ಣ ಹಾಗೂ ವಸಂತ ಶೆಟ್ಟಿ ಅಪ್ಪಣ್ಣ ಹೆಗ್ಡೆ, ಎ.ಜೆ.ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಂಜುನಾಥ ಭಂಡಾರಿ, ಸವಣೂರು ಸೀತಾರಾಮ ರೈ, ಮುಲ್ಕಿ ದುಗ್ಗಣ್ಣ ಸಾವಂತ, ಎಂ.ಬಿ. ಪುರಾಣಿಕ್, ಲೀಲಾಕ್ಷ ಬಿ.ಕರ್ಕೇರಾ, ಅರವಿಂದ ಪೂಂಜಾ, ಇಂದ್ರಾಳಿ ಜಯಕರ ಶೆಟ್ಟಿ, ಕಾಪು ಲಿಲಾಧರ ಶೆಟ್ಟಿ, ಮುಲ್ಕಿ ಸುಕುಮಾರ ಶೆಟ್ಟಿ, ಮನೋಹರ ಶೆಟ್ಟಿ, ಜಯರಾಜ ರೈ. ಪ್ರದೀಪ್ ಕುಮಾರ್ ಕಲ್ಕೂರ, ವೇದ ವ್ಯಾಸ ಕಾಮತ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ , ವಿಜಯ ಬ್ಯಾಂಕಿನ ಎ.ಬಿ.ಶೆಟ್ಟಿ,ವಿಶ್ವನಾಥ ನಾಯಕ್,ಮುದ್ದಣ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಜು.30 ಪಡುಬಿದ್ರೆಯಲ್ಲಿ ಪ್ರತಿಭಟನಾ ಸಭೆ:- ಮುಲ್ಕಿ ಸುಂದರರಾಮ ಶೆಟ್ಟಿ ಯವರ ಹೆಸರನ್ನು ಎಲ್‌ಎಚ್‌ಎಚ್ ರಸ್ತೆಗೆ ಇಡಬೇಕು ಎಂದು ಆಗ್ರಹಿಸಿ ಪಡುಬಿದ್ರೆಯಲ್ಲಿ ಜು.30ರಂದು ಪ್ರತಿಭಟನಾ ಜಾಥ ನಡೆಯಲಿದೆ ಎಂದು ಸಭೆಯಲ್ಲಿ ನಿರ್ಣಯ ಮಂಡಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News