×
Ad

ಅಲೆವೂರು: ಮಗುಚಿ ಬಿದ್ದ ವ್ಯಾನ್, ಮೂವರಿಗೆ ಗಾಯ

Update: 2017-07-29 21:34 IST

ಉಡುಪಿ, ಜು.29: ಮಣಿಪಾಲ, ಕುಕ್ಕಿಕಟ್ಟೆ ಅಲೆವೂರು ಮಾರ್ಗವಾಗಿ ಎಟಿಎಂಗೆ ಹಣ ತುಂಬಿಸಿ ವಾಪಾಸಾಗುತಿದ್ದ ವ್ಯಾನ್ ಒಂದು ಇಂದು ಅಪರಾಹ್ನದ ವೇಳೆ ಅಲೆವೂರು ಬಳಿ ಮಗುಚಿ ಬಿದ್ದ ಪರಿಣಾಮ ಅದರಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.

ಸಿಎಂಎಸ್ ಎಟಿಎಂ ಅಸೋಸಿಯೇಟ್ ಕಂಪೆನಿಗೆ ಸೇರಿದ ಈ ಗಾಡಿ ಎಟಿಎಂಗಳಿಗೆ ಹಣ ತುಂಬಿಸಿ ವಾಪಾಸಾಗುತಿದ್ದಾಗ ಅಲೆವೂರು ಬಳಿ ಈ ಘಟನೆ ನಡೆದಿದೆ. ಜೋರು ಮಳೆ ಸುರಿಯುತಿದ್ದ ವೇಳೆ ಚಾಲಕನ ನಿಯಂತ್ರಮ ಕಳೆದುಕೊಂಡ ಗಾಡಿ ಪಲ್ಟಿ ಹೊಡೆಯಿತೆಂದು ಹೇಳಲಾಗಿದೆ.

ಘಟನೆಯಲ್ಲಿ ವ್ಯಾನಿನ ಚಾಲಕ ರಾಘವೇಂದ್ರ, ಕಂಪೆನಿಯ ನೌಕರರಾದ ವಿರಾಜ್, ಶ್ರೀಕಾಂತ್ ಹಾಗೂ ಗನ್‌ಮ್ಯಾನ್ ಮುದ್ದಪ್ಪ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News