×
Ad

ಯುನಿವೆಫ್: 'ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ' ಗಾಗಿ ಅರ್ಜಿ ಆಹ್ವಾನ

Update: 2017-07-30 17:01 IST

ಮಂಗಳೂರು, ಜು. 30: ನಾಡು, ನುಡಿ, ಭಾಷೆ ಹಾಗೂ ಸಮುದಾಯ ಮತ್ತು ಸಮಾಜದ ಒಳಿತು ಹಾಗೂ ಪ್ರಗತಿಗಾಗಿ ಯಾವುದೇ ರೀತಿಯ ಪ್ರಶಸ್ತಿ ಹಾಗೂ ಪ್ರತಿಫಲಾಪೇಕ್ಷೆಯಿಲ್ಲದೆ ಶ್ರಮಿಸುತ್ತಿರುವ ವ್ಯಕ್ತಿಯೊಬ್ಬರಿಗೆ 'ಯುನಿವೆಫ್ ಕರ್ನಾಟಕ' ಪ್ರತಿವರ್ಷ 5,000 ರೂ. ನಗದನ್ನೊಳಗೊಂಡ 'ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ' ಯನ್ನು ನೀಡುತ್ತಾ ಬಂದಿದ್ದು, 2017ನೆ ಸಾಲಿನ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಪ್ರಶಸ್ತಿಗೆ ಅರ್ಹನಾದ ವ್ಯಕ್ತಿ ಯಾವುದೇ ಸಂಘಟನೆಯ ಸದಸ್ಯನಾಗಿರಬಾರದು. 2014 ರಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ, 2015 ರಲ್ಲಿ ಚರಿತ್ರೆಕಾರ ಮತ್ತು ಸಾಹಿತಿ ಬಿ.ಎಂ. ಇಚ್ಲಂಗೋಡ್ ಮತ್ತು 2016 ರಲ್ಲಿ ಪತ್ರಿಕಾ ಛಾಯಾಗ್ರಾಹಕ, ಕವಿ, ಲೇಖಕ ಮರ್ಹೂಮ್ ಅಹ್ಮದ್ ಅನ್ವರ್ ರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. 

ದ.ಕ. ಜಿಲ್ಲೆಯ ಮುಸ್ಲಿಮ್ ಸಮುದಾಯದ ಇಂಥ ವ್ಯಕ್ತಿಗಳ ಪರಿಚಯವಿರುವವರು ಅದನ್ನು 'ಆಯ್ಕೆ ಸಮಿತಿ'ಯ ಗಮನಕ್ಕೆ ತರಬೇಕೆಂದು ಯುನಿವೆಫ್ ಕರ್ನಾಟಕ ಕಾರ್ಯದರ್ಶಿ ಯು. ಕೆ. ಖಾಲಿದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 
 
ಆಯ್ಕೆ ಸಮಿತಿ: ಕೆರಿಯರ್ ಗೈಡೆನ್ಸ್ & ಇನ್ಫಾರ್ಮೇಶನ್ ಸೆಂಟರ್, ಮಂಗಳೂರು ಇದರ ಅಧ್ಯಕ್ಷ ಉಮರ್ U.H. (ಮೊ. ಸಂ:- 98450 54191) ಹಾಗೂ ಮುಸ್ಲಿಮ್ ಲೇಖಕರ ಸಂಘದ ಉಪಾಧ್ಯಕ್ಷ ಬಿ. ಎ. ಮುಹಮ್ಮದ್ ಅಲಿ (ಮೊ. ಸಂ:- 9880723929) ಇವರು ಆಯ್ಕೆ ಸಮಿತಿ ಸದಸ್ಯರಾಗಿರುತ್ತಾರೆ. 

ಈ ಪ್ರಶಸ್ತಿಯನ್ನು ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಫಳ್ನೀರ್ ನಲ್ಲಿರುವ ದಾರುಲ್ ಇಲ್ಮ್ ನಲ್ಲಿ ನೀಡಲಾಗುವುದು. ಆ.8ರ ಒಳಗಾಗಿ ಅರ್ಹ ಅಭ್ಯರ್ಥಿಗಳನ್ನು ಸೂಚಿಸಿ ಆಯ್ಕೆ ಸಮಿತಿಯ ವಿಳಾಸಕ್ಕೆ ಕಳುಹಿಸಬೇಕಾಗಿ ವಿನಂತಿ. ಅಧ್ಯಕ್ಷರು ಉಮರ್ U.H., ಕೆರಿಯರ್ ಗೈಡೆನ್ಸ್ & ಇನ್ಫಾರ್ಮೇಶನ್ ಸೆಂಟರ್, ಅಲ್ ರಹಬಾ ಕಾಂಪ್ಲೆಕ್ಸ್, ನೆಲ್ಲಿಕಾಯಿ ರಸ್ತೆ, ಮಂಗಳೂರು 575 001. ಹೆಚ್ಚಿನ ವಿವರಗಳಿಗಾಗಿ ಯು. ಕೆ. ಖಾಲಿದ್ 9845199931, ಸೈಫುದ್ದೀನ್ 9945913824, ಹುದೈಫ್ 9964129116 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News