ಝೀನತ್ ಭಕ್ಷ್ ಜುಮಾ ಮಸೀದಿಗೆ ಚುನಾವಣೆ: ಬಿರುಸಿನ ಮತಎಣಿಕೆ ಪ್ರಕ್ರಿಯೆ
Update: 2017-07-30 17:12 IST
ಮಂಗಳೂರು, ಜು.30: ನಗರದ ಬಂದರ್ ನ ಝೀನತ್ ಭಕ್ಷ್ ಮಸೀದಿಯ ಆಡಳಿತ ಸಮಿತಿಗೆ ಇಂದು ಬೆಳಗ್ಗೆ 9ರಿಂದ ಅಪರಾಹ್ನ 3 ಗಂಟೆಯವರೆಗೆ ಬದ್ರಿಯಾ ಕಾಲೇಜಿನಲ್ಲಿ ಮತದಾನ ನಡೆಯಿತು.
ಸಂಜೆ ನಾಲ್ಕು ಗಂಟೆಯ ಬಳಿಕ ಮತಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಕುದ್ರೋಳಿ ವಾರ್ಡ್ ನ 2 ಸ್ಥಾನಗಳಿಗೆ ಮೂವರು ಸ್ಪರ್ಧಿಸಲಿದ್ದು, ಶೇ.84ರಷ್ಟು ಮತದಾನವಾಗಿದೆ. ಬಂದರ್ ವಾರ್ಡ್ ನಿಂದ 3 ಸ್ಥಾನಗಳಿಗೆ 8 ಮಂದಿ ಸ್ಪರ್ಧಿಸಲಿದ್ದು, ಶೇ.75ರಷ್ಟು ಮತದಾನವಾಗಿದೆ.
ಕಂಕನಾಡಿ, ಫಳ್ನೀರ್, ಜೆಪ್ಪು, ಬೋಳಾರ, ಕಂದಕ್ ಪ್ರದೇಶದಿಂದ ಹಾಜಿ ಯೆನೆಪೊಯ ಅಬ್ದುಲ್ಲಾ ಕುಂಞಿ, ಹಾಜಿ ಎಸ್. ಎಂ. ರಶೀದ್, ಹನೀಫ್ ಹಾಜಿ ಬಂದರ್ ಹಾಗೂ ಅದ್ದು ಹಾಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಂದರ್ ವಾರ್ಡ್ ನಿಂದ ಮಾಜಿ ಮೇಯರ್ ಕೆ. ಅಶ್ರಫ್, ಐ ಮೊಯ್ದಿನಬ್ಬ ಆಯ್ಕೆಯಾಗಿದ್ದಾರೆ. 11 ಸದಸ್ಯರ ಪೈಕಿ 6 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 5 ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ.