ಆಳ್ವಾಸ್ ವಿದ್ಯಾರ್ಥಿನಿ ಆತ್ಮಹತ್ಯೆ: ತನಿಖೆಗೆ ಎಸ್‌ಐಒ ಆಗ್ರಹ
Update: 2017-07-30 17:20 IST
ಉಡುಪಿ, ಜು.30: ಮೂಡಬಿದಿರೆ ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾಳ ನಿಗೂಢ ಸಾವು ಪ್ರಕರಣದ ಕೂಲಂಕಷ ತನಿಖೆ ನಡೆಸಲು ಸರಕಾರ ಮಧ್ಯ ಪ್ರವೇಶಿಸಬೇಕು ಹಾಗೂ ಉನ್ನತ ಮಟ್ಟದ ತನಿಖೆಗೆ ಸೂಚಿಸಬೇಕು ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(ಎಸ್‌ಐಒ) ಉಡುಪಿ ಜಿಲ್ಲಾ ಘಟಕ ಒತ್ತಾಯಿಸಿದೆ.
ಕಾವ್ಯಾಳ ಹೆತ್ತವರು ಇದೊಂದು ವ್ಯವಸ್ಥಿತವಾಗಿ ಕೊಲೆ ಎಂದು ಆರೋಪ ಹೊರಿಸಿರುವ ಹಿನ್ನೆಲೆಯಲ್ಲಿ ಈ ಸಾವಿನ ಕುರಿತು ನ್ಯಾಯಯುತವಾಗಿ ತನಿಖೆ ನಡೆಸಿ, ಸತ್ಯ ಹೊರತರಬೇಕು ಹಾಗೂ ಕಾವ್ಯಾಳ ಪೋಷಕರಿಗೆ ನ್ಯಾಯ ಕೊಡಿಸಬೇಕು. ಪ್ರಕರಣದ ಹಿಂದಿರುವ ಸತ್ಯಾಸತ್ಯತೆ ಪೊಲೀಸ್ ಇಲಾಖೆ ಬಯಲಿಗೆಳೆಯಬೇಕು ಎಂದು ಎಸ್‌ಐಒ ಉಡುಪಿ ಜಿಲ್ಲಾಧ್ಯಕ್ಷ ಶುಐಬ್ ಮಲ್ಪೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.