ಕಾವ್ಯಾ ಪೂಜಾರಿಯ ಮನೆಗೆ ಐವನ್ ಭೇಟಿ
Update: 2017-07-30 17:32 IST
ಮಂಗಳೂರು, ಜು.30: ಆಳ್ವಾಸ್ ಕಾಲೇಜಿನ ಮೃತ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ಮನೆಗೆ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಭೇಟಿ ನೀಡಿದರು.
ಪ್ರಕರಣದ ಬಗ್ಗೆ ವಿವರ ಪಡೆದುಕೊಂಡ ಬಳಿಕ ಕಾವ್ಯಾಳ ತಂದೆ ಲೋಕೇಶ್ ಹಾಗೂ ತಾಯಿ ಬೇಬಿಯವರಿಗೆ ಸಾಂತ್ವನ ಹೇಳಿದರು. ಅಲ್ಲದೆ ಕಾವ್ಯಾಳ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರಲ್ಲದೆ, ಸರಕಾರದ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಕೂಡಾ ಒದಗಿಸಿ ಕೊಡುವುದಾಗಿ ತಿಳಿಸಿದರು.
ಈ ಸಂದರ್ಭ ತಾಪಂ ಸದಸ್ಯ ಸುಕುಮಾರ್ ಸನಿಲ್, ಮಾಜಿ ಸದಸ್ಯ ಪ್ರಕಾಶ್ ಪಿ., ಗ್ರಾಪಂ ಮಾಜಿ ಅಧ್ಯಕ್ಷ ಸಂಜೀವ ಮಡಿವಾಳ, ಉಪಾಧ್ಯಕ್ಷ ಚಂದ್ರಹಾಸ್, ಪದ್ಮ ಪ್ರಸಾದ್ ಜೈನ್ ಮೂಡುಬಿದಿರೆ, ಆಲ್ವಿನ್ ಡಿಸೋಜ, ಸೀತಾರಾಮ ಕುಲಾಲ್, ಸದಾನಂದ ಕಟೀಲು ಮತ್ತಿತರರು ಉಪಸ್ಥಿತರಿದ್ದರು.