ನಮಾಝ್ ಮಾಡುವ ಜವಾನನಿಗೆ ಅನ್ಯಧರ್ಮದ ಸಹೋದ್ಯೋಗಿಯ ಕಾವಲು: ಫೋಟೊ ವೈರಲ್

Update: 2017-07-30 12:06 GMT

ಹೊಸದಿಲ್ಲಿ, ಜು.30: ದೇಶದಲ್ಲಿ ಕೋಮುಶಕ್ತಿಗಳು ದ್ವೇಷ ಭಾವನೆಯನ್ನು ವ್ಯಾಪಕವಾಗಿ ಹರಡುತ್ತಿರುವ ಇಂದಿನ ದಿನಗಳಲ್ಲಿ ಹಿಂದೂ ಮುಸ್ಲಿಮ್ ಸೌಹಾರ್ದತೆಗೆ ಸಿಆರ್ ಪಿಫ್ ಜವಾನರಿಬ್ಬರು ಸಾಕ್ಷಿಯಾಗಿದ್ದಾರೆ.

ಕರ್ತವ್ಯದ ವೇಳೆ ಸಮವಸ್ತ್ರದಲ್ಲಿರುವ ಸಿಆರ್‍ಪಿಎಫ್ ಜವಾನರೊಬ್ಬರು ನಮಾಝ್ ಮಾಡುತ್ತಿದ್ದು, ಅವನ ಬಳಿ ನಿಂತ ಬಂದೂಕುಧಾರಿಯಾದ ಇನ್ನೊಬ್ಬ ಸಿಆರ್‍ಪಿಎಫ್ ಜವಾನ ಗಸ್ತು ಕಾಯುತ್ತಿರುವ ಫೋಟೋ ವೈರಲ್ ಆಗಿದೆ.

ನಮಾಝ್ ಮಾಡುತ್ತಿರುವ ಜವಾನ ತನ್ನೆಲ್ಲ ಆಯುಧಗಳನ್ನು ತೆಗೆದಿರಿಸಿದ್ದರೆ, ಮತ್ತೋರ್ವರು ಕಾವಲು ನಿಂತಿದ್ದಾರೆ. ಪತ್ರಕರ್ತರೊಬ್ಬರು ಈ ಫೋಟೊವನ್ನುಟ್ವೀಟ್ ಮಾಡಿ ಇದು 'ನಿಜವಾದ' ಭಾರತ ಎಂದು ಬರೆದಿದ್ದಾರೆ. ಈ ಫೋಟೊ ಸಿಆರ್‍ಪಿಎಫ್‍ನ ಆಫಿಶಿಯಲ್ ಟ್ವಿಟರ್‍ನಿಂದ ರಿಟ್ವೀಟ್ ಮಾಡಲಾಗಿದೆ. ಈ ಫೋಟೊಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News