ಮಾನವ ಬಂಧುತ್ವ ವೇದಿಕೆಯಿಂದ ನಾಗರ ಪಂಚಮಿ ಆಚರಣೆ
Update: 2017-07-30 17:59 IST
ವಿಟ್ಲ, ಜು. 30: ಮಾನವ ಬಂಧುತ್ವ ವೇದಿಕೆ ಕರ್ನಾಟಕ, ಬಂಟ್ವಾಳ ತಾಲೂಕು ಸಮಿತಿ ಹಾಗೂ ಯಕ್ಷಲೋಕ ಬಿ.ಸಿ.ರೋಡು ಆಶ್ರಯದಲ್ಲಿ ಬಿ.ಸಿ.ರೋಡಿನ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಹಾಲು ಮತ್ತು ಬಾಳೆಹಣ್ಣು ವಿತರಿಸುವ ಮೂಲಕ ನಾಗರ ಪಂಚಮಿಯನ್ನು ಆಚರಿಸಲಾಯಿತು.
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಯೋಜಕ ನಾರಾಯಣ ಕಿಲ್ಲಂಗೋಡಿ, ಬಂಟ್ವಾಳ ತಾಲೂಕು ಸಂಯೋಜಕ ಗೋಪಾಲ ಅಂಚನ್, ಪುತ್ತೂರು ತಾಲೂಕು ಸಂಯೋಜಕ ಸುಂದರ್ ನಿಡ್ಪಳ್ಳಿ, ಸಲಹೆಗಾರರಾದ ರಮೇಶ್ ನಾಯಕ್ ರಾಯಿ, ಶಿವಪ್ರಸಾದ್ ಶೆಟ್ಟಿ., ಎಚ್ಕೆ. ನಯನಾಡು, ಲೋಲಾಕ್ಷ ನೆತ್ತರಕೆರೆ, ಕೆ.ಎಚ್. ಅಬುಬಕ್ಕರ್, ರತ್ನದೇವ್ ಪುಂಜಾಲಕಟ್ಟೆ, ಸತೀಶ್ ಕುಮಾರ್ ಬಿ., ಮಮತ ಶೆಟ್ಟಿ, ಸವಿತಾ ಕಿರಣ್, ಆಶ್ರಮ ಶಾಲಾ ಮುಖ್ಯ ಶಿಕ್ಷಕ ಪ್ರಸಾದ್, ಮೊದಲಾದವರು ಉಪಸ್ತಿತರಿದ್ದರು.