ಮಿತ್ತೂರು: ಎಸ್.ಕೆ.ಎಸ್.ಬಿ.ವಿ. ಅಧ್ಯಕ್ಷರಾಗಿ ಸುಹೈಫ್ ಅಖ್ತರ್
ವಿಟ್ಲ, ಜು. 30: ಮಿತ್ತೂರು ಸಿರಾಜುಲ್ ಹುದಾ ಮದ್ರಸ ವಿದ್ಯಾರ್ಥಿ ಸಂಘಟನೆಯಾದ ಎಸ್‌ಕೆಎಸ್‌ಬಿವಿ ಇದರ ನೂತನ ಅಧ್ಯಕ್ಷರಾಗಿ ಸುಹೈಫ್ ಅಕ್ತರ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಉಪಾಧ್ಯಕ್ಷರಾಗಿ ಮುಹಮ್ಮದ್ ನಹೀಂ ಹಾಗೂ ಮುಹಮ್ಮದ್ ನವಾಝ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಿಝ್ವಾನ್, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಬಶ್ಶಿರ್ ಹಾಗೂ ಮುಹಮ್ಮದ್ ಹಾಫಿಳ್, ಕೊಶಾಧಿಕಾರಿಯಾಗಿ ಮುಹಮ್ಮದ್ ಹಫೀರ್, ವಿದ್ಯಾರ್ಥಿನಿ ನಾಯಕಿಯಾಗಿ ಝೈನಬಾ ಶಮ್ನಾ, ಉಪ ನಾಯಕಿಯಾಗಿ ಖದೀಜ ಶೈಮಾ, ಸ್ವಚ್ಛತಾ ಮಂತ್ರಿಯಾಗಿ ಫಾತಿಮತ್ ಹಫೀದ, ಆರೋಗ್ಯ ಮಂತ್ರಿಯಾಗಿ ಫಾತಿಮತ್ ಫಿದಾ, ಸಹ ಮಂತ್ರಿಯಾಗಿ ಮುಹಮ್ಮದ್ ಸಹ್ಲ್, ನೀರಾವರಿ ಮಂತ್ರಿಯಾಗಿ ಶಾಝಿನ್, ಸಹ ಮಂತ್ರಿಗಳಾಗಿ ಬಿಲಾಲ್ ಹಾಗೂ ಅನಸ್, ಗ್ರಂಥಾಲಯ ಮಂತ್ರಿಯಾಗಿ ಆಯಿಷತ್ ಸ್ವಬಿಯ್ಯ, ಸಹ ಮಂತ್ರಿಯಾಗಿ ರಝೀಂ ಸುಲ್ತಾನ್ ಅವರು ಚುನಾಯಿತರಾದರು.
ಮದ್ರಸಾ ಮುಖ್ಯ ಶಿಕ್ಷಕ ಪಿ.ಎ. ಮರ್ಧಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯನ್ನು ಸ್ಥಳೀಯ ಖತೀಬ್ ಮುಹಮ್ಮದ್ ಆಸಿಫ್ ಅಲ್-ಅಝ್ಹರಿ ಉದ್ಘಾಟಿಸಿದರು. ಮದ್ರಸ ಅಧ್ಯಾಪಕ ಆಸಿಫ್ ಅಲ್-ಅಝ್ಹರಿ, ಹಾಜಿ ಆದಂ ಮುಸ್ಲಿಯಾರ್ ಚುನಾವಣಾ ವೀಕ್ಷಕರಾಗಿ ಸಹಕರಿಸಿದರು. ನಿಕಟ ಪೂರ್ವ ಕಾರ್ಯದರ್ಶಿ ನವಾರ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಮುಹಮ್ಮದ್ ರಿಝ್ವಾನ್ ವಂದಿಸಿದರು.