ಆಲಡ್ಕ ಎನ್‌ಟಿಎಸ್‌ಎಸ್ ಪದಾಧಿಕಾರಿಗಳ ಆಯ್ಕೆ
ವಿಟ್ಲ : ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧೀನಕ್ಕೊಳಪಟ್ಟ ನೂರಾನಿಯಾ ಅರಬಿಕ್ ದರ್ಸ್ ವಿದ್ಯಾರ್ಥಿಗಳ ಸಂಘಟನೆ ನಿಬ್ರಸತ್ತುಲಬಾ ಸಾಹಿತ್ಯ ಸಮಾಜದ ವಾರ್ಷಿಕ ಮಹಾಸಭೆ ಇತ್ತೀಚೆಗೆ ದರ್ಸ್ ಸಭಾಂಗಣದಲ್ಲಿ ನಡೆಯಿತು. ಮಸೀದಿ ಮುದರ್ರಿಸ್ ಶೈಖುನಾ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.
ಗೌರವಾಧ್ಯಕ್ಷ ಹಾಗೂ ನಿರ್ದೇಶಕರಾಗಿ ಶೈಖುನಾ ಬಿ.ಎಚ್. ಉಸ್ತಾದ್, ಅಧ್ಯಕ್ಷರಾಗಿ ಎಸ್.ಎಂ. ಅಬ್ದುಲ್ ಖಾದರ್ ಮದನಿ, ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಇಬ್ರಾಹಿಂ ಬಾತಿಷಾ ನಂದಾವರ, ಉಪಾಧ್ಯಕ್ಷರಾಗಿ ಮುಹಮ್ಮದ್ ಜುನೈದ್ ಬಂಟ್ವಾಳ, ಜೊತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಹನೀಫ್ ಬೊಳ್ಳಾಯಿ, ಮುಹಮ್ಮದ್ ಮುಸ್ತಫಾ ಮೋಂತಿಮಾರು, ಕೋಶಾಧಿಕಾರಿಯಾಗಿ ಮುಹಮ್ಮದ್ ಅನ್ಸೀಫ್ ನಂದಾವರ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆರಿಫ್ ಇರಾ, ಶರ್ವಾನ್ ನಂದಾವರ, ಹಸೈನಾರ್ ಕಳಂಜಿಬೈಲ್, ಹಸೈನಾರ್ ನಂದಾವರ, ಅರ್ಫಾರ್ ಆಲಡ್ಕ, ಜುನೈದ್ ಬೋಗೋಡಿ, ನವಾರ್ ನೂಜಿ, ಇರ್ಶಾದ್ ಎಡಪದವು, ಫಾಮಿದ್ ನಂದಾವರ, ತ್ವಯ್ಯಿಬ್ ಇರಾ, ಶಿಹಾಬ್ ಇರಾ, ತಮೀಮ್ ಸೂರಲ್ಪಾಡಿ, ನೌಫಲ್ ಬೋಳಂತೂರು, ಅಮೀರ್ ಇರಾ, ಹಫೀರ್ ಬೋಗೋಡಿ, ಉವೈಸ್ ಸರಳೀಕಟ್ಟೆ, ಸ್ವಲಾಹುದ್ದೀನ್ ದೆಂಜಿಪಾಡಿ, ಶಫೀಕ್ ಬೋಗೋಡಿ ಅವರನ್ನು ಆರಿಸಲಾಯಿತು.