ಸೆ. 3ರಂದು ‘ಬಲೆ ಗೊಬ್ಬುಗ ಕೆಸರ್‌ಡೊಂಜಿ ದಿನ’
ಮಂಗಳೂರು, ಜು. 30: ಪ್ರಜ್ವಲ್ ಯುವಕ ಮಂಡಲ (ರಿ) ಸೂಟರ್‌ಪೇಟೆ, ಲಯನ್ಸ್ ಕ್ಲಬ್ ಮತ್ತು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಎಕ್ಕೂರು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸೆ.3ರಂದು ‘ಬಲೆ ಗೊಬ್ಬುಗ ಕೆಸರ್‌ಡೊಂಜಿ ದಿನ ’ ಕ್ರೀಡಾಕೂಟವು ಎಕ್ಕೂರಿನ ಕೃಷಿ ವಿಜ್ಞಾನ ಕೇಂದ್ರ- ಫಿಶರೀಸ್ ಕಾಲೇಜು ಆವರಣದಲ್ಲಿರುವ ಕೆಸರುಗದ್ದೆಯಲ್ಲಿ ನಡೆಯಲಿದೆ.
ಕೆಸರ್‌ಡೊಂಜಿ ದಿನ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳನ್ನು ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿದೆ . ಪುರುಷ ಹಾಗೂ ಮಹಿಳೆಯರಿಗಾಗಿ ಹಗ್ಗ ಜಗ್ಗಾಟ, ಮಡಕೆ ಹೊಡೆಯುವ ಸ್ಪರ್ಧೆ ಹಾಗೂ ವಿವಿಧ ಆಟ - ಓಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಗಳಲ್ಲಿ ಪುರುಷರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ಮುಂಚಿತವಾಗಿ ತಮ್ಮ ತಂಡಗಳ ಹೆಸರನ್ನು ನೊಂದಣೆ ಮಾಡಿಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮಹೇಶ್ ಕುಮಾರ್ (9916848555) ಹಾಗೂ ಅನಿಲ್ ಪೆರಿಸ್ (9535357173) ಇವರನ್ನು ಸಂಪರ್ಕಿಸುವಂತೆ ಸಂಘಟಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ .