ಬಾಲಕನಿಂದ ಮಗುವಿಗೆ ದೌರ್ಜನ್ಯ: ದೂರು ದಾಖಲು
Update: 2017-07-30 20:15 IST
ಬಂಟ್ವಾಳ, ಜು. 30: ಮೂರು ವರ್ಷದ ಮಗುವೊಂದನ್ನು ಆಟವಾಡಿಸಲೆಂದು ಕರೆದುಕೊಂಡು ಹೋದ ಸಂಬಂಧಿಕ ಬಾಲಕ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರೋಪಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ 3 ವರ್ಷದ ಮಗುವನ್ನು 17 ವರ್ಷ ಬಾಲಕ ಆಟವಾಡಲು ಕರೆದುಕೊಂಡು ಹೋಗುತ್ತಿದ್ದ ಎನ್ನಲಾಗಿದ್ದು, ಜು. 22ರಂದು ಮನೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಮನೆಗೆ ಕರೆದು ಕೊಂಡು ಹೋದ ಬಾಲಕ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ದೂರಲಾಗಿದೆ. ಮಗು ಈ ಬಗ್ಗೆ ತಾಯಿಯಲ್ಲಿ ಹೇಳಿಕೊಂಡಿದ್ದರಿಂದ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಲಾಗಿದ್ದು, ವಿಟ್ಲ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.