×
Ad

ಆಟಿ ಕೂಟ -ಕುಟುಂಬೋತ್ಸವ ಕಾರ್ಯಕ್ರಮ

Update: 2017-07-30 20:30 IST

ಕಾಪು, ಜು.30: ಕಾಪು ಜೇಸಿಐನ ಜೇಸಿರೆಟ್ ವಿಭಾಗದ ನೇತೃತ್ವದಲ್ಲಿ ಕಾಪು ಜೇಸಿ ಭವನದಲ್ಲಿ ಶನಿವಾರ ಆಯೋಜಿಸಲಾದ ಆಟಿ -ಕೂಟ ಮತ್ತು ಕುಟುಂಬೋತ್ಸವ ಕಾರ್ಯಕ್ರಮವನ್ನು ಜೇಸಿಐ ವಲಯ ಹದಿನೈದರ ವಲಯ ನಿರ್ದೇಶಕ ರತ್ನಾಕರ ಇಂದ್ರಾಳಿ ಉದ್ಘಾಟಿಸಿದರು.

ಜೇಸಿಐ ರಾಷ್ಟ್ರೀಯ ಸಂಯೋಜಕಿ ರೂಪಶ್ರೀ, ಎಲ್‌ಐಸಿ ಅಧಿಕಾರಿ ಮುಕುಂದ್ ಶುಭಾಶಂಸನೆಗೈದರು. ಜೇಸಿಐ ವಲಯ ಉಪಾಧ್ಯಕ್ಷೆ ಸೌಮ್ಯ ರಾಕೇಶ್, ಕಾಪು ಜೇಸಿಐ ಅಧ್ಯಕ್ಷ ಸಂದೀಪ್ ಶೆಟ್ಟಿ, ಕಾರ್ಯದರ್ಶಿ ರಮೇಶ್ ನಾಯ್ಕಿ, ಕಾರ್ಯಕ್ರಮ ಸಂಯೋಜಕಿ ಶಾರದೇಶ್ವರಿ ಗುರ್ಮೆ ಉಪಸ್ಥಿತರಿದ್ದರು.

2016ನೇ ಸಾಲಿನಲ್ಲಿ ಜೇಸಿಐ ಇಂಡಿಯಾ ಫೌಂಡೇಶನ್‌ಗೆ ದೇಣಿಗೆ ನೀಡಿದ್ದ ಎಲ್ಲೂರು ಶಾಲಾ ಮುಖ್ಯ ಶಿಕ್ಷಕಿ ಶರವಾತಿ ರವಿರಾಜ್, ಕಾಪು ಜೇಸಿಐನ ಸದಸ್ಯರಾದ ಶ್ರೆನಿವಾಸ್ ಐತಾಳ್, ಅರುಣಾ ಐತಾಳ್, ಅಕ್ಷತಾ ದೀಪಕ್, ಸಾವಿತ್ರಿ ನಾಯ್ಕಿ ಅವರಿಗೆ ಫೌಂಡೇಷನ್ ಪಿನ್ ನೀಡಿ ಗೌರವಿಸಲಾಯಿತು.

ಆಟಿ ಕೂಟದಲ್ಲಿ ಸದಸ್ಯರು ಮನೆಯಲ್ಲಿ ಸಿದ್ಧಪಡಿಸಿ ತಂದಿರುವ ಸುಮಾರು 21 ಬಗೆಯ ತಿಂಡಿ ತಿನಸುಗಳನ್ನು ಎಲ್ಲರಿಗೂ ಉಣ ಬಡಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಜೇಸಿರೆಟ್ ಅಧ್ಯಕ್ಷೆ ಅಧ್ಯಕ್ಷೆ ಸುಖಲಾಕ್ಷಿ ಬಂಗೇರ ಸ್ವಾಗತಿಸಿ ದರು. ಜೇಸಿರೆಟ್ ಸಂಯೋಜಕಿ ಸಾವಿತ್ರಿ ನಾಯ್ಕಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News