ಸ್ಪೇನ್ ಸಂಗೀತ ಉತ್ಸವದಲ್ಲಿ ಬೆಂಕಿ: 22,000 ಮಂದಿಯ ತೆರವು
Update: 2017-07-30 22:16 IST
ಮ್ಯಾಡ್ರಿಡ್ (ಸ್ಪೇನ್), ಜು. 30: ಸ್ಪೇನ್ ದೇಶದ ನಗರ ಬಾರ್ಸಿಲೋನದಲ್ಲಿ ಶನಿವಾರ ಸಂಗೀತ ಉತ್ಸವ ನಡೆಯುತ್ತಿದ್ದ ವೇದಿಕೆಯಲ್ಲಿ ಬೆಂಕಿ ಹೊತ್ತಿಕೊಂಡಾಗ 22,000ಕ್ಕೂ ಅಧಿಕ ಜನರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಯಿತು.
ಸಾಂತಾ ಕೊಲೊಮ ಡಿ ಗ್ರೇಮ್‌ನೆಟ್‌ನಲ್ಲಿ ನಡೆಯುತ್ತಿದ್ದ ‘ಟುಮಾರೊಲ್ಯಾಂಡ್’ ಸಂಗೀತ ಹಬ್ಬದಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಅಗ್ನಿಶಾಮಕ ತಂಡ ಧಾವಿಸಿತು ಹಾಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು ಎಂದು ಅಗ್ನಿಶಾಮಕ ಕಚೇರಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಬೆಂಕಿ ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲ.