ಮಂಗಳೂರು: ಕೊಟ್ಟಾರಿ ಯುವ ಸಮಾವೇಶ
ಮಂಗಳೂರು, ಜು.30: ಕೊಟ್ಟಾರಿ ಯುವ ವೇದಿಕೆಯ ಉದ್ಘಾಟನೆ, ಯುವ ಸಮಾವೇಶ ಹಾಗೂ ವಿದ್ಯಾನಿಧಿ ಉದ್ಘಾಟನೆ ಕಾರ್ಯಕ್ರಮವು ರವಿವಾರ ನಗರದ ಪುರಭವನದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಹಿಂದಿನ ಕಾಲದಿಂದಲೂ ವಿಶ್ವಾಸಕ್ಕೆ ಹೆಸರಾಗಿರುವ ಕೊಟ್ಟಾರಿ ಸಮಾಜವು ಇಂದಿಗೂ ತನ್ನ ಘನತೆಯನ್ನು ಕಾಯ್ದುಕೊಂಡಿರುವುದು ಶ್ಲಾಘನೀಯ. ಈ ಸಮುದಾಯವು ವಿಶ್ವಾಸಕ್ಕೆ ಅರ್ಹರು. ರಾಜರ ಆಳ್ವಿಕೆಯಲ್ಲಿ ಕೊಟ್ಟಾರಿ ಸಮಾಜಕ್ಕೆ ಖಜಾನೆ ಕಾಯುವ ಜವಾಬ್ದಾರಿ ನೀಡಲಾಗಿರುವುದು ಅದಕ್ಕೆ ಸಾಕ್ಷಿ ಎಂದರು.
ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕರಾವಳಿ ಕಾಲೇಜು ಸಮೂಹ ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್ ವಿದ್ಯಾನಿಧಿ ಉದ್ಘಾಟಿಸಿದರು. ದ.ಕ. ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಎಂ.ಪುರುಷೋತ್ತಮ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು.
ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಶಾಸಕ ಜೆ.ಆರ್. ಲೋಬೊ, ಮೇಯರ್ ಕವಿತಾ ಸನಿಲ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಎಡಪದವು ಭೂತನಾಥೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ್ ಶೆಟ್ಟಿ, ಚಿತ್ರನಟ ನವೀನ್ ಡಿ. ಪಡೀಲ್, ಸಮಾಜದ ಪ್ರಮುಖರಾದ ವಾಸುದೇವ ಕೊಟ್ಟಾರಿ, ಉಮಾನಾಥ ಕೊಟ್ಟಾರಿ, ಜಯಪ್ರಕಾಶ್ ವಾಮಂಜೂರುಮ ಡಾ.ಕಿಶೋರ್ ಕೊಟ್ಟಾರಿ, ನೋಣಯ್ಯ ಕೊಟ್ಟಾರಿ, ಶ್ರೀನಿವಾಸ ಕೊಟ್ಟಾರಿ, ನೇಮು ಕೊಟ್ಟಾರಿ, ಕೇಶವ ಕೊಟ್ಟಾರಿ, ಯೋಗೀಶ್ ಕೊಟ್ಟಾರಿ ಉಪಸ್ಥಿತರಿದ್ದರು.
ಯುವ ಒಕ್ಕೂಟದ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ ಸ್ವಾಗತಿಸಿದರು, ಶುಕರಾಜ್ ಎಸ್.ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಶೋಭಾಯಾತ್ರೆ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.