ಜರ್ಮನಿ: ನೈಟ್‌ಕ್ಲಬ್‌ನಲ್ಲಿ ಗುಂಡು ಹಾರಾಟ; 2 ಸಾವು
Update: 2017-07-30 22:19 IST
ಬರ್ಲಿನ್, ಜು. 30: ದಕ್ಷಿಣ ಜರ್ಮನಿಯ ಕೊನ್‌ಸ್ಟಾಂಝ್ ನಗರದ ನೈಟ್‌ಕ್ಲಬ್ ಒಂದರಲ್ಲಿ ರವಿವಾರ ವ್ಯಕ್ತಿಯೊಬ್ಬ ನಡೆಸಿದ ಗುಂಡು ಹಾರಾಟದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಶಂಕಿತ ವ್ಯಕ್ತಿಯು ಗಂಭೀರವಾಗಿ ಗಾಯಗೊಂಡಿದ್ದಾನೆ. ಕಾಳಗದಲ್ಲಿ ಓರ್ವ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದಾರೆ.
ದಾಳಿಗೆ ಕಾರಣಗಳು ಗೊತ್ತಾಗಿಲ್ಲ.
ನಗರದಾದ್ಯಂತ ವಿಶೇಷ ಪೊಲೀಸ್ ಕಮಾಂಡೊ ಪಡೆಗಳನ್ನು ನೇಮಿಸಲಾಗಿದೆ ಎಂದು ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದರು.