ಮೂಡುಬಿದಿರೆ: ರೋಟರಿ ಕ್ಲಬ್‌ನಿಂದ ಸ್ವಚ್ಛತಾ ಅಭಿಯಾನ
Update: 2017-07-30 22:58 IST
ಮೂಡುಬಿದಿರೆ, ಜು. 30: ರೋಟರಿ ಕ್ಲಬ್ ಮೂಡುಬಿದಿರೆ ಮತ್ತು ವಿಜಯನಗರ ವೆಲ್‌ಫೇರ್ ಅಸೋಸಿಯೇಶನ್ ಇವುಗಳ ವತಿಯಿಂದ ವಿಜಯನಗರದ ರಸ್ತೆಗಳ ವ್ಯಾಪ್ತಿಯಲ್ಲಿ ರವಿವಾರ ಸ್ವಚ್ಛತಾ ಅಭಿಯಾನ ನಡೆಯಿತು.
ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಅವರು ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಕಾಮತ್ ಮಾತನಾಡಿ ಪ್ರತಿ ವಾರದ ರವಿವಾರ ಮೂಡುಬಿದಿರೆ ನಗರದ ಬೇರೆ ಬೇರೆ ಆವರಣಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಸಹಿತ ಕಸಕಡ್ಡಿಗಳನ್ನು ಹೆಕ್ಕುವ ಮೂಲಕ ಸ್ವಚ್ಛತೆಯನ್ನು ಕಾಪಾಡಲಾಗುವುದು ಎಂದು ಹೇಳಿದರು.
ಪುರಸಭಾ ಸದಸ್ಯ ರತ್ನಾಕರ ದೇವಾಡಿಗ, ರೋಟರಿ ಕಾರ್ಯದರ್ಶಿ ಮಹಮ್ಮದ್ ಆರಿಫ್, ಸ್ವಚ್ಛತಾ ಅಭಿಯಾನದ ಜಿಲ್ಲಾ ಸಮಿತಿ ಸಭಾಪತಿ ಡಾ/ ಹರೀಶ್ ನಾಯಕ್, ವಿಜಯನಗರ ವೆಲ್‌ಫೇರ್ ಅಸೋಸಿಯೇಶನ್‌ನ ಡಾ/ವಿನಯ ಕುಮಾರ್ ಹೆಗ್ಡೆ, ರೋಟರಿ ಕ್ಲಬ್‌ನ ಸಹಾಯಕ ರಾಜ್ಯಪಾಲ ಎ.ಎಮ್ ಕುಮಾರ್ ಮತ್ತಿತರರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.