ಪಾವೂರು: ಅಂಬೇಡ್ಕರ್ ಭವನಕ್ಕೆ ಕಲ್ಲೆಸೆದು ಹಾನಿ
Update: 2017-07-30 23:20 IST
ಉಳ್ಳಾಲ, ಜು. 30: ಪಾವೂರು ಗ್ರಾಮದ ಕಂಬಳಪದವು ಸರಕಾರಿ ಪ್ರೌಢಶಾಲೆ ಸಮೀಪವಿರುವ ಮಿನಿ ಅಂಬೇಡ್ಕರ್ ಭವನಕ್ಕೆ ಕಿಡಿಗೇಡಿಗಳು ಕಲ್ಲೆಸೆದು ಹಾನಿ ಮಾಡಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ರವಿವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಭವನದ ಕಿಟಕಿಗಳ ಅರ್ಧ ಭಾಗ ಮರ ಹಾಗೂ ಇನ್ನರ್ಧ ಭಾಗ ಗಾಜಿನಿಂದ ನಿರ್ಮಿಸಲಾಗಿದ್ದು, ಕಿಡಿಗೇಡಿಗಳು ಕಲ್ಲೆಸೆದು ಗಾಜುಗಳನ್ನು ಪುಡಿಗೈದಿದ್ದಾರೆ. ಕೊಣಾಜೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.