ಜೆಡಿಎಸ್ ದ.ಕ. ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿ ನಿಸಾರ್ ಅಹ್ಮದ್ ಮುಲ್ಕಿ
Update: 2017-07-30 23:27 IST
ಮಂಗಳೂರು, ಜು. 30: ಜಾತ್ಯತೀತ ಜನತಾದಳ ದ.ಕ. ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿ ನಿಸಾರ್ ಅಹ್ಮದ್ ಮುಲ್ಕಿ ಅವರನ್ನು ಆಯ್ಕೆ ಮಾಡಲಾಗಿದೆ.
ಹಿರಿಯ ಮುಖಂಡ ಕೆ.ಅಮರನಾಥ ಶೆಟ್ಟಿ, ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಕುಞಿ ಹಾಗು ರಾಜ್ಯ ನಾಯಕರಾದ ಇಕ್ಬಾಲ್ ಅಹ್ಮದ್ ಮುಲ್ಕಿ ಮತ್ತು ರಿಯಾಝ್ ಕಾರ್ನಾಡ್ ರವರ ಶಿಫಾರಸಿನ ಮೇರೆಗೆ ದ.ಕ. ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅಝೀಝ್ ಕುದ್ರೋಳಿ ಆಯ್ಕೆ ಮಾಡಿ ಆದೇಶ ಹೊರಡಿಸಿದರು.