ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ವಲಯ ಮಟ್ಟದ ಕಾರ್ಯಕ್ರಮ
Update: 2017-07-31 18:12 IST
ಹೆಬ್ರಿ, ಜು. 31: ಹೆಬ್ರಿ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೆಬ್ರಿ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಹೆಬ್ರಿ ವಲಯದ ಪದಾಧಿಕಾರಿಗಳಿಗೆ ತರಭೇತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಹಿರಿಯ ಧಾರ್ಮಿಕ ಮುಂದಾಳು ಎಚ್. ಭಾಸ್ಕರ ಜೋಯಿಸ್ ಉದ್ಘಾಟಿಸಿದರು. ವಲಯಾಧ್ಯಕ್ಷ ಮುದ್ದುಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಕಾರ್ಕಳ ತಾಲ್ಲೂಕು ಯೋಜನಾಧಿಕಾರಿ ಕೃಷ್ಣ ಟಿ, ಲೆಕ್ಕ ಪರಿಶೋಧಕರಾದ ಮಮತಾ, ಹೆಬ್ರಿ ವಲಯ ಮೇಲ್ವಿಚಾರಕ ಹರೀಶ್ ಆಚಾರ್ಯ ಮಾಹಿತಿ ನೀಡಿದರು. 11 ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು. ಗಾಂಧಿನಗರ ಒಕ್ಕೂಟದ ಅಧ್ಯಕ್ಷೆ ಗಾಯತ್ರಿ ಸ್ವಾಗತಿಸಿ ಕೊಂಡೆಜಡ್ಡು ಒಕ್ಕೂಟದ ರಾಜೇಶ್ ವಂದಿಸಿ ಸೇವಾ ಪ್ರತಿನಿಧಿಗಳಾದ ಸಹದೇವ್ ಮತ್ತು ಕಾಂತಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.