×
Ad

ಮನೆಗೆ ನುಗ್ಗಿ ನಗ-ನಗದು ಕಳವು

Update: 2017-07-31 18:33 IST

ಕಾರ್ಕಳ, ಜು. 31: ಮನೆಗೆ ನುಗ್ಗಿ ನಗ-ನಗದು ಕಳವು ಮಾಡಿದ ಘಟನೆ ಇಲ್ಲಿನ ಬಂಗ್ಲೆಗುಡ್ಡೆ ಪರನೀರು ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ. 

ಸ್ಥಳೀಯ ನಿವಾಸಿ ಹೈದರಾಲಿ ಎಂಬವರ ಮನೆಯಲ್ಲಿ ಕಳವು ನಡೆದಿದೆ. 7,700 ರೂ., 4 ಪವನ್ ಚಿನ್ನ ಮತ್ತು 50 ಸಾವಿರ ರೂ. ಮೌಲ್ಯದ ಸ್ಕೂಟಿ, 20 ಸಾವಿರ ರೂ. ಮೌಲ್ಯದ ಎರಡು ಮೊಬೈಲ್ ಫೋನ್, ಎಟಿಎಂ ಕಾರ್ಡ್, ಬ್ಯಾಂಕ್ ಚೆಕ್ ಬುಕ್, ಸ್ಕೂಟರ್‌ನ ದಾಖಲೆಪತ್ರಗಳು ಹಾಗೂ ಚಾಲನೆ ಪರವಾನಿಗೆ ಪ್ರತಿಯನ್ನು ಕೂಡ ಕಳವು ಮಾಡಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News