ಬಂಟ್ವಾಳ: ಚರಂಡಿಗೆ ಬಿದ್ದ ದೆಹಲಿ ಮೂಲದ ಅನುಮಾನಾಸ್ಪದ ಕಾರು
Update: 2017-07-31 21:25 IST
ಬಂಟ್ವಾಳ, ಜು. 31: ದೆಹಲಿ ಮೂಲದ ಕಾರೊಂದು ಅನುಮಾನಾಸ್ಪದ ರೀತಿಯಲ್ಲಿ ವೀರಕಂಬ ಸಮೀಪದ ಕೋಡಪದವು ಒಳ ರಸ್ತೆಯ ಚರಂಡಿಯೊಂದಕ್ಕೆ ಬಿದ್ದ ಸ್ಥಿತಿಯಲ್ಲಿ ರವಿವಾರ ತಡ ರಾತ್ರಿ ಪತ್ತೆಯಾಗಿದೆ.
ತಡ ರಾತ್ರಿ ಮಂಗಳೂರು ರಸ್ತೆಯ ಮೂಲಕ ಬಂದ ಕಾರು ಕೋಡಪದವು ಒಳ ರಸ್ತೆಯಲ್ಲಿ ತೆರಳಿ ರಸ್ತೆ ಬದಿಯ ಚರಂಡಿಗೆ ನುಗ್ಗಿದೆ. ಸ್ಥಳೀಯ ನಿವಾಸಿಗಳು ಕಾರಿನ ಬಳಿ ಹೋಗುತ್ತಿದ್ದಂತೆ ಅಲ್ಲಿದ್ದವರು ಪರಾರಿಯಾಗಿದ್ದಾರೆ ನ್ನಲಾಗಿದೆ.
ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ದಾಖಲೆ ಪತ್ರಗಳ ಮಾಹಿತಿ ತರಿಸಿಕೊಂಡ ಬಳಿಕ ಸ್ವಯಂ ಪ್ರಕರಣ ದಾಖಲಿಸಿಕೊಳ್ಳುವ ಮಾಹಿತಿ ನೀಡಿದ್ದಾರೆ.
ಕಲ್ಲಡ್ಕ ಚೆಕ್ ಪೋಸ್ಟ್ ಮೂಲಕ ವಿಟ್ಲ ಕಡೆಗೆ ಅನುಮಾಸ್ಪದ ಕಾರು ಬಂದಿದ್ದರೂ ಇದರ ಬಗ್ಗೆ ಸೂಕ್ತ ಗಮನ ಹರಿಸದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.