ಮಲಗಿದ್ದ ವ್ಯಕ್ತಿಯ ಕಾಲ ಮೇಲೆ ಹರಿದ ಲಾರಿ
Update: 2017-07-31 21:30 IST
ಮಂಗಳೂರು, ಜು.31: ನಗರದ ಕೊಟ್ಟಾರ ಚೌಕಿಯ ಫ್ಲೈ ಓವರ್‌ನಡಿ ಮಲಗಿದ್ದ ಫಕೀರ್ ಸಾಬ್ ಎಂಬವರ ಕಾಲಿನ ಮೇಲೆ ಲಾರಿ ಹರಿದ ಘಟನೆ ರವಿವಾರ ರಾತ್ರಿ 10:30ಕ್ಕೆ ನಡೆದಿದೆ.
ಲಾರಿ ಚಾಲಕ ಕೊಟ್ಟಾರ ಚೌಕಿ ಸರ್ವಿಸ್ ರಸ್ತೆ ಕಡೆಯಿಂದ ಫ್ಲೈಓವರ್‌ನಡಿ ಖಾಲಿಯಿರುವ ಜಾಗದಲ್ಲಿ ಪಾರ್ಕ್ ಮಾಡುವ ಸಲುವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಕೀರ್‌ಸಾಬ್‌ರ ಕಾಲ ಮೇಲೆ ಹರಿಸಿದ ಎಂದು ರೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಫಕೀರ್ ಸಾಬ್‌ಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಲಾರಿಯ ಚಾಲಕ ಗೋವಿಂದರಾಜು ಮತ್ತು ಶಿವಾನಂದ ಎಂಬವರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರು ಎನ್ನಲಾಗಿದೆ. ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.