×
Ad

ಐಸಿಸ್ ಸೇರಿದ್ದನೆನ್ನಲಾದ ಯುವಕನ ಕೊಲೆ: ವಾಟ್ಸ್ಅಪ್ ಸಂದೇಶ

Update: 2017-07-31 22:40 IST

ಕಾಸರಗೋಡು, ಜು. 31:  ಕಾಸರಗೋಡ್ ನಿಂದ ನಾಪತ್ತೆಯಾಗಿ ಐಸಿಸ್ ಸಂಘಟನೆಗೆ ಸೇರ್ಪಡೆಗೊಂಡಿದ್ದನೆನ್ನಲಾದ  ಕಾಸರಗೋಡ್ ನಿವಾಸಿಯೋರ್ವ ಕೊಲೆಗೀಡಾಗಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ.

ಕಾಸರಗೋಡು ಪಡನ್ನದ ಮರ್ವಾನ್ ಇಸ್ಮಾಯಿಲ್ (23) ಎಂಬಾತ ಕೊಲೆಯಾಗಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಈ ಕುರಿತು ಮನೆಯವರಿಗೆ ವಾಟ್ಸ್ಅಪ್ ಸಂದೇಶ ಲಭಿಸಿದ್ದು, ಆದರೆ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ  ಸ್ಪಷ್ಟಪಡಿಸಿಲ್ಲ. ಪಡನ್ನದ ಕೆ.ಪಿ. ಅಸ್ಫಕ್ ಎಂಬಾತನ ಹೆಸರಿನಲ್ಲಿ ಈ ಸಂದೇಶ ಮನೆಯವರಿಗೆ ಲಭಿಸಿದೆ.

ಐಸಿಸ್ ಸಂಘಟನೆಗೆ ಸೇರಿದ 21  ಮಂದಿಯಲ್ಲಿ  ಟಿ.ಕೆ. ಹಾಫಿಝುದ್ದೀನ್, ಮುರ್ಷಿದ್ ಮುಹಮ್ಮದ್, ಪಾಲಕ್ಕಾಡ್ ನ   ಯಾಹ್ಯಾ ಈ ಹಿಂದೆ ಅಪಘಾನಿಸ್ತಾನದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News